ಕರ್ನಾಟಕ

karnataka

ETV Bharat / sitara

ಕಾಲಿಗೆ ತೊಡಕಾದ ಉದ್ದನೆಯ ಗೌನ್​.. ಕೆಳಗೆ ಬೀಳುವುದರಿಂದ ತಪ್ಪಿಸಿಕೊಂಡ ಶಿಲ್ಪಾ ಶೆಟ್ಟಿ ​- ವಿಡಿಯೋ - ಸಾಮಾಜಿಕ ಜಾಲತಾಣಲ್ಲಿ ಶಿಲ್ಪಾ ಶೆಟ್ಟಿ ವಿಡಿಯೋ ವೈರಲ್​

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ತಾವು ಧರಿಸಿದ್ದ ಡ್ರೆಸ್​ನಿಂದ ಮುಜುಗರಕ್ಕೆ ಒಳಗಾಗುತ್ತಿದ್ದ ಪ್ರಸಂಗದಿಂದ ಪಾರಾಗಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

Shilpa Shetty
ಶಿಲ್ಪಾ ಶೆಟ್ಟಿ

By

Published : Dec 5, 2021, 10:45 PM IST

​ಹೈದರಾಬಾದ್: ಬಾಲಿವುಡ್​ ನಟಿಯರು ಪ್ರಶಸ್ತಿ ಸಮಾರಂಭಗಳು ಮತ್ತು ಪಾರ್ಟಿಗಳಿಗೆ ಧರಿಸುವಂತಹ ಬಟ್ಟೆಗಳು ಅವರನ್ನು ಕೆಲವೊಮ್ಮೆ ಮುಜುಗರವನ್ನುಂಟು ಮಾಡುವ ಪರಿಸ್ಥಿತಿ ತಂದು ಬಿಡುತ್ತವೆ. ಅಂತಹದ್ದೇ ಸ್ಥಿತಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಎದುರಾಗಿತ್ತು.

ಶಿಲ್ಪಾ ಶೆಟ್ಟಿ ಇತ್ತೀಚೆಗೆ ನಡೆದ ಪ್ರಶಸ್ತಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ನಟಿ ಉದ್ದನೆಯ ಬಿಳಿ ಬಣ್ಣದ ಗೌನ್ ಧರಿಸಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಆಗ ಮಾಧ್ಯಮದವರನ್ನು ಭೇಟಿಯಾಗಲು ಶಿಲ್ಪಾ ಮುಂದಾದಾಗ ಅವರ ಡ್ರೆಸ್​ ಕಾಲಿಗೆ ಸಿಕ್ಕಿಹಾಕಿಕೊಂಡಿತ್ತು. ಈ ವೇಳೆ ಶಿಲ್ಪಾ ಬ್ಯಾಲೆನ್ಸ್ ಮಾಡಿ ಬೀಳದಂತೆ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗ್ತಿದೆ.

ಶಿಲ್ಪಾ ಶೆಟ್ಟಿ ತಮ್ಮ ಉಡುಪಿನ ಕಾರಣದಿಂದ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಅನೇಕ ಘಟನೆಗಳು ನಡೆದಿವೆ. ಕೇವಲ ಶಿಲ್ಪಾ ಶೆಟ್ಟಿ ಮಾತ್ರವಲ್ಲದೆ ಹಲವು ನಟಿಯರು ಕೂಡ ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ.

ಇದನ್ನೂ ಓದಿ: 1000 ಸಂಚಿಕೆ ಪೂರ್ಣಗೊಳಿಸಿದ 'ಕೌನ್​​ ಬನೇಗಾ ಕರೋಡ್​​​ಪತಿ': ಭಾವುಕರಾಗಿ ಕಣ್ಣೀರಿಟ್ಟ ಬಿಗ್​ ಬಿ

ABOUT THE AUTHOR

...view details