ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಸಂಬಂಧ ಪತಿ ರಾಜ್ಕುಂದ್ರಾ ಬಂಧನದ ಬಳಿಕ ಪತ್ನಿ ಶಿಲ್ಪಾಶೆಟ್ಟಿ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ನಾನು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ನೀಡಿದ್ದೇನೆ ಎನ್ನಲಾದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆರವುಗೊಳಿಸಬೇಕು ಎಂದು ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಶಿಲ್ಪಾಶೆಟ್ಟಿ ಹೇಳಿಕೆ ವಿವರ..
‘ಹೌದು, ಕಳೆದ ಕೆಲವು ದಿನಗಳಿಂದ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. ಬಹಳಷ್ಟು ವದಂತಿಗಳು ಮತ್ತು ಆರೋಪಗಳು ಕೇಳಿ ಬರುತ್ತಿವೆ. ಮಾಧ್ಯಮಗಳು ಹಾಗೂ ಹಿತೈಷಿಗಳು ನನ್ನ ವಿರುದ್ಧ ಅನಪೇಕ್ಷಿತ ಆರೋಪಗಳನ್ನು ಮಾಡಿದ್ದಾರೆ. ನನಗೆ ಮಾತ್ರವಲ್ಲ, ನನ್ನ ಕುಟುಂಬದವರ ವಿರುದ್ಧವೂ ಸಾಕಷ್ಟು ಟ್ರೋಲ್ ಆಗುತ್ತಿವೆ, ಪ್ರಶ್ನೆಗಳು ಬರುತ್ತಿವೆ. ಈ ಪ್ರಕರಣ ಪೂರ್ವಾಗ್ರಹವಾಗಿದ್ದು ನಾನು ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ಆದ್ದರಿಂದ ದಯವಿಟ್ಟು ನನ್ನ ವಿರುದ್ಧ ಆರೋಪಿಸುವುದನ್ನು ನಿಲ್ಲಿಸಿ.