ಕರ್ನಾಟಕ

karnataka

ETV Bharat / sitara

ಪತಿ ರಾಜ್ ಕುಂದ್ರಾರಿಂದ ದೂರವಾಗಲು ಹೊರಟಿದ್ದಾರಾ ಶಿಲ್ಪಾ ಶೆಟ್ಟಿ? - ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ

ಕೆಲ ದಿನಗಳ ಕಾಲ ಮೌನವಾಗಿದ್ದ ನಟಿ ಸುದೀರ್ಘ ವಿರಾಮದ ನಂತರ ಆಗಸ್ಟ್ 23ರಂದು ಇನ್‌ಸ್ಟಾಗ್ರಾಮ್​ನಲ್ಲಿ ಯೋಗ ಮಾಡುವ ವಿಡಿಯೋವನ್ನು ಪೋಸ್ಟ್​ ಮಾಡುವ ಮೂಲಕ 'ನಿಮ್ಮ ರಕ್ಷಣೆಗಾಗಿ ನೀವೇ ಯೋಧರಾಗಿರಿ' ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದರು..

Shilpa Shetty plans life away from Raj Kundra?
ಪತಿ ರಾಜ್ ಕುಂದ್ರಾರಿಂದ ದೂರವಾಗಲು ಹೊರಟಿದ್ದಾರಾ ಶಿಲ್ಪಾ ಶೆಟ್ಟಿ

By

Published : Aug 30, 2021, 4:07 PM IST

ಮುಂಬೈ :ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ತನ್ನ ಪತಿ ರಾಜ್ ಕುಂದ್ರಾ ಬಂಧನಕ್ಕೊಳಗಾದ ಬಳಿಕ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ತಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತರಲು ಹೊರಟಂತೆ ಕಾಣುತ್ತದೆ. ಪತಿ ರಾಜ್ ಕುಂದ್ರಾರಿಂದ ದೂರವಾಗಲು ಯೋಜಿಸುತ್ತಿರುವುದಾಗಿ ಹೇಳಲಾಗಿದೆ.

ಕಳೆದ ತಿಂಗಳು ವಿಚಾರಣೆ ವೇಳೆ ಆ ಮೊಬೈಲ್ ಆ್ಯಪ್​ಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಪತಿ ನಿರಪರಾಧಿ, ಈ ದಂಧೆಯಲ್ಲಿ ಅವರು ಭಾಗಿಯಾಗಿಲ್ಲ ಎಂದು ಮುಂಬೈ ಕ್ರೈಂ ಬ್ರಾಂಚ್ ಬಳಿ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ರು.

ಆದರೆ, ಈಗ ಕುಂದ್ರಾರ ಒಂದು ಪೈಸೆಯನ್ನೂ ಮುಟ್ಟದೇ ಇರಲು ನಿರ್ಧರಿಸಿದ್ದಾರೆ. ಮಗ ವಿಯಾನ್ ರಾಜ್ ಕುಂದ್ರಾ ಮತ್ತು ಮಗಳು ಶಮೀಶಾ ಕುಂದ್ರಾ ಜೊತೆ ಇರಲು ಸುರಕ್ಷಿತ ವಾತಾವರಣ ಕಂಡುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜೀವನದಲ್ಲಿ ಮಾಡುವ 'ತಪ್ಪು'ಗಳಿಂದ ಕಲಿಯುವ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿದ್ದು ಹೀಗೆ..

14 ವರ್ಷಗಳ ಬಳಿಕ ಹಂಗಾಮ-2 ಸಿನಿಮಾದಲ್ಲಿ ನಟಿಸುವ ಮೂಲಕ ಶಿಲ್ಪಾ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ಆದ್ರೆ, ಚಿತ್ರ ಬಿಡುಗಡೆಗೆ ಕೆಲ ದಿನಗಳಿರುವಾಗಲೇ ಪತಿಯನ್ನು ಬಂಧಿಸಲಾಗಿತ್ತು. ಇವರ ನಟನೆಯ 'ನಿಕಮ್ಮಾ' ಸಿನಿಮಾ ಬಿಡುಗಡೆಯಾಗಬೇಕಿದೆ. ಹಂಗಾಮ-2 ಮತ್ತು ನಿಕಮ್ಮಾ ಬಳಿಕ ಹೆಚ್ಚಿನ ಅವಕಾಶಗಳಿಗೆ ನಟಿ ಕಾಯುತ್ತಿದ್ದಾರೆ ಎಂದು ವೆಬ್ ಪೋರ್ಟಲ್​​ವೊಂದಕ್ಕೆ ಶಿಲ್ಪಾ ಶೆಟ್ಟಿಯ ಸ್ನೇಹಿತೆ ತಿಳಿಸಿದ್ದಾರೆ.

ಅಶ್ಲೀಲ ವಿಡಿಯೋ ಚಿತ್ರೀಕರಣ ಕೇಸ್ ​:ಲಂಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಮೊಬೈಲ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಡಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಮತ್ತು ರಯಾನ್ ಥಾರ್ಪೆ ಸೇರಿ 11 ಮಂದಿಯನ್ನು ಜುಲೈ 19ರಂದು ಮುಂಬೈ ಪೊಲೀಸರು ಬಂಧಿಸಿದ್ದರು.

ಕೆಲ ದಿನಗಳ ಕಾಲ ಮೌನವಾಗಿದ್ದ ನಟಿ ಸುದೀರ್ಘ ವಿರಾಮದ ನಂತರ ಆಗಸ್ಟ್ 23ರಂದು ಇನ್‌ಸ್ಟಾಗ್ರಾಮ್​ನಲ್ಲಿ ಯೋಗ ಮಾಡುವ ವಿಡಿಯೋವನ್ನು ಪೋಸ್ಟ್​ ಮಾಡುವ ಮೂಲಕ 'ನಿಮ್ಮ ರಕ್ಷಣೆಗಾಗಿ ನೀವೇ ಯೋಧರಾಗಿರಿ' ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದರು. ಮೊನ್ನೆಯಷ್ಟೇ ಈ ನಟಿ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಜೀವನದಲ್ಲಿ ಮಾಡುವ ತಪ್ಪುಗಳಿಂದ ಕಲಿಯುವ ಬಗ್ಗೆ ಬರೆದ ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದರು.

ABOUT THE AUTHOR

...view details