ಕರ್ನಾಟಕ

karnataka

ETV Bharat / sitara

'ಪಾರ್ಶ್ವ ಸುಖಾಸನ'ದ ಪ್ರಯೋಜನ ವಿವರಿಸಿದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ - Parsva Sukhasana news

ಇನ್‌ಸ್ಟಾಗ್ರಾಂನಲ್ಲಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕುಂದ್ರಾ 'ಪಾರ್ಶ್ವ ಸುಖಾಸನ'ದ ಪ್ರಯೋಜನಗಳನ್ನು ವಿವರಿಸಿದ್ದಾರೆ. ಶಿಲ್ಪಾ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಯೋಗಾಭ್ಯಾಸ ಮಾಡಲು ಪ್ರೇರಣೆ ನೀಡಿದಂತಾಗಿದೆ.

Shilpa Shetty Kundra lists benefits of 'Parsva Sukhasana'
'ಪಾರ್ಶ್ವ ಸುಖಾಸನ'ದ ಪ್ರಯೋಜನ

By

Published : Jun 15, 2021, 1:58 PM IST

ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕುಂದ್ರಾ 'ಪಾರ್ಶ್ವ ಸುಖಾಸನ'ದ ಪ್ರಯೋಜನಗಳನ್ನು ವಿವರಿಸಿದರು.

"ಇದು ರೋಗ ನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಕ್ರಮೇಣ ಪರಿಣಾಮ ಬೀರುವ ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೈಹಿಕವಾಗಿ, ಕುತ್ತಿಗೆ, ಭುಜಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ" ಎಂದು ಬರೆದಿದ್ದಾರೆ.

"ನಿಮಗೆ ಸಾಧ್ಯವಾದಾಗ ಸ್ವಲ್ಪ ಸಮಯ ಈ ಆಸನವನ್ನು ಅಭ್ಯಾಸ ಮಾಡಿ. ಶಾಂತ ಮತ್ತು ಸಂಯೋಜಿತ ಮನಸ್ಸು ಮತ್ತು ದೇಹವು ನಾವು ಯೋಚಿಸುವುದಕ್ಕಿಂತ ಹೆಚ್ಚಿನದ್ದನ್ನು ನಿಭಾಯಿಸುತ್ತದೆ" ಎಂದು ಅವರು ಹೇಳುತ್ತಾರೆ.

ಶಿಲ್ಪಾ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಯೋಗಾಭ್ಯಾಸ ಮಾಡಲು ಪ್ರೇರಣೆ ನೀಡಿದಂತಾಗಿದೆ.

ಶಿಲ್ಪಾ 'ಹಂಗಮಾ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಪರೇಶ್ ರಾವಲ್ ಮತ್ತು ಮೀಜಾನ್ ಜಾಫೆರಿ ಕೂಡ ನಟಿಸಿದ್ದಾರೆ.

ABOUT THE AUTHOR

...view details