ಹೈದರಾಬಾದ್(ತೆಲಂಗಾಣ): ಅಶ್ಲೀಲ ಸಿಡಿ ವಿಚಾರವಾಗಿ ಬಂಧನವಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಈಗಾಗಲೇ ಜಾಮೀನು ಮೇಲೆ ರಿಲೀಸ್ ಆಗಿದ್ದಾರೆ. ಇದಾದ ಬಳಿಕ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಮೇಲಿಂದ ಮೇಲೆ ಹೊಸ ಹೊಸ ಫೋಟೋ ಹಾಕಿಕೊಳ್ಳುತ್ತಿರುವ ನಟಿ ಸದ್ಯ ಮತ್ತೊಂದು ಫೋಟೋ ಅಪ್ಲೋಡ್ ಮಾಡಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡು ನೆಟ್ಟಿಗರು ಕಾಲೆಳೆದಿದ್ದಾರೆ.
ತಮ್ಮ ಕೂದಲಿಗೆ ಕತ್ತರಿ ಹಾಕಿಸಿರುವ ನಟಿ ಶಿಲ್ಪಾ, ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.ತಲೆಯ ಹಿಂಭಾಗದಲ್ಲಿರುವ ಕೂದಲು ಚಿಕ್ಕದಾಗಿ ಕತ್ತರಿಸಿಕೊಂಡಿರುವ ನಟಿ ಅದರ ವಿಡಿಯೋ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.