ಹೈದರಾಬಾದ್: ಮಂಗಳೂರು ಮೂಲದ ಬಾಲಿವುಡ್ ನಟಿ, ನಿರ್ಮಾಪಕಿ ಶಿಲ್ಪಾ ಶೆಟ್ಟಿ ಇಂದು ತಮ್ಮ 46ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಇಂದಿಗೂ ಅದೇ ಬ್ಯೂಟಿ, ಅದೇ ಫಿಟ್ನೆಸ್ ಕಾಪಾಡಿಕೊಂಡು ಸದಾ ಖುಷ್ ಆಗಿರುತ್ತಾರೆ ಬಳುಕುವ ಬಳ್ಳಿ.
ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ 1975 ಜೂನ್ 8ರಂದು ಮಂಗಳೂರಿನ ಸುರೇಂದ್ರ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ದಂಪತಿಗೆ ಶಿಲ್ಪಾ ಶೆಟ್ಟಿ ಜನಿಸಿದರು. ಮುಂಬೈನಲ್ಲಿ ಔಷಧ ಕಂಪನಿಯೊಂದನ್ನು ಶಿಲ್ಪಾ ಪೋಷಕರು ನಡೆಸುತ್ತಿದ್ದರಿಂದ ಇವರೂ ಮುಂಬೈನಲ್ಲೇ ವಿದ್ಯಾಭ್ಯಾಸ ನಡೆಸಿ, ಮಾಡೆಲಿಂಗ್ ಲೋಕಕ್ಕೆ ಹೆಜ್ಜೆ ಹಾಕಿದರು.
1993ರಲ್ಲಿ ಶಾರುಕ್ ಖಾನ್ ನಟನೆಯ 'ಬಾಜಿಗರ್' ಸಿನಿಮಾ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದ ನಟಿ, ಧಡಕನ್, ಮೈ ಕಿಲಾಡಿ ತು ಅನಾರಿ, ರಿಶ್ತೆ, ಫಿರ್ ಮಿಲೇಂಗೆನಂತಹ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇವರ 'ಚುರಾ ಕೆ ದಿಲ್ ಮೇರಾ' ಹಾಡಿಗೆ ಹುಡುಗರು ಫಿದಾ ಆಗಿದ್ದರು. ಹಿಂದಿ ಮಾತ್ರವಲ್ಲ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲೂ ಇವರು ಬಣ್ಣ ಹಚ್ಚಿದ್ದಾರೆ.
ಪತಿ ರಾಜ್ಕುಂದ್ರಾರೊಂದಿಗೆ ಶಿಲ್ಪಾ ಕನ್ನಡದ 'ಪ್ರೀತ್ಸೋದ್ ತಪ್ಪಾ' ಹಾಗೂ 'ಒಂದಾಗೋಣ ಬಾ' ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ 'ಆಟೋ ಶಂಕರ್' ಚಿತ್ರದಲ್ಲೂ ನಟಿಸಿದ್ದಾರೆ.
ಪ್ರತಿನಿತ್ಯ ಯೋಗ ಮಾಡುವ ಶಿಲ್ಪಾ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ 2009ರಲ್ಲಿ ಉದ್ಯಮಿ ರಾಜ್ಕುಂದ್ರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಕುಂದ್ರಾ- ಶೆಟ್ಟಿ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಯೋಗ ಮತ್ತು ಡಯೆಟ್ ಇವರ ಯೌವನದ ರಹಸ್ಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕುಟುಂಬದೊಂದಿಗಿನ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.
ಕುಟುಂಬದೊಂದಿಗ ಹೋಳಿ ಹಬ್ಬ ಆಚರಣೆ ಝಲಕ್ ದಿಕಲಾಜಾ, ನಚ್ ಬಲಿಯೇ ಎಂಬ ಡ್ಯಾನ್ಸ್ ಶೋಗಳಿಗೆ ತೀರ್ಪುಗಾರ್ತಿಯಾಗಿದ್ದ ಶಿಲ್ಪಾ ಇದೀಗ ಸೂಪರ್ ಡ್ಯಾನ್ಸರ್ ಶೋಗೆ ಜಡ್ಜ್ ಆಗಿದ್ದಾರೆ.
ತಂಗಿ ಶಮಿತಾ ಶೆಟ್ಟಿ ಜೊತೆ ಶಿಲ್ಪಾ ಇತ್ತೀಚೆಗಷ್ಟೇ ಇವರ ಕುಟುಂಬ ವೈರಸ್ ಸುಳಿಯಲ್ಲಿ ಸಿಲುಕಿತ್ತು. ಪತಿ, ಮಗ ಮತ್ತು ಒಂದು ವರ್ಷದ ಮಗಳು, ಪೋಷಕರಿಗೆ ಕೊರೊನಾ ಸೋಂಕು ತಗುಲಿತ್ತು.
ತಂದೆ ಸುರೇಂದ್ರ ಶೆಟ್ಟಿಯೊಂದಿಗೆ ನಟಿ ತಾಯಿ ಸುನಂದಾ ಶೆಟ್ಟಿ ಜೊತೆ ಶಿಲ್ಪಾ