ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾನನ್ನು ಪೊಲೀಸರು ಬಂಧಿಸಿದ್ದರು. ಈ ಬಳಿಕ ಪತ್ನಿ ಶಿಲ್ಪಾ ಶೆಟ್ಟಿ ತೀವ್ರ ಮುಜುಗರಕ್ಕೀಡಾಗಿದ್ದಾರೆ ಎನ್ನಲಾಗಿತ್ತು. ಇನ್ನು ಘಟನೆ ಸಂಭವಿಸಿದ ನಂತರ ನಾಪತ್ತೆಯಾಗಿದ್ದ ಶಿಲ್ಪಾ ಇದೀಗ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ 4ರಲ್ಲಿ ಮತ್ತೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಬ್ರೇಕ್‌ನ ನಂತರ ಸೂಪರ್ ಡ್ಯಾನ್ಸರ್ ಶೋದಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ - actor Shilpa Shetty News
ಪತಿ ರಾಜ್ ಕುಂದ್ರಾ ಪ್ರಕರಣದ ಬಳಿಕ ನಾಪತ್ತೆಯಾಗಿದ್ದ ಶಿಲ್ಪಾ ಶೆಟ್ಟಿ ಇದೀಗ ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ 4ನಲ್ಲಿ ಮತ್ತೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ
ಶಿಲ್ಪಾ ಕಾರ್ಯಕ್ರಮಕ್ಕೆ ಹಿಂದಿರುಗುತ್ತಿದ್ದಂತೆ ಸಹ ತೀರ್ಪುಗಾರರಾಗಿದ್ದ ಚಲನಚಿತ್ರ ನಿರ್ಮಾಪಕ ಅನುರಾಗ್ ಬಸು ಮತ್ತು ನೃತ್ಯ ಸಂಯೋಜಕಿ ಗೀತಾ ಕಪೂರ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ವರದಿಗಳ ಪ್ರಕಾರ, ಶಿಲ್ಪಾ ಮಂಗಳವಾರದ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದು ವಾರಾಂತ್ಯದಲ್ಲಿ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.
ಕಾರ್ಯಕ್ರಮದ ನಿರ್ಮಾಪಕ ರಂಜೀತ್ ಠಾಕೂರ್ ಅವರನ್ನು ಸುದ್ದಿ ಸಂಸ್ಥೆಯೊಂದು ಸಂಪರ್ಕಿಸಿದಾಗ ಶಿಲ್ಪಾ ಶೆಟ್ಟಿ ಉಪಸ್ಥಿತಿಯನ್ನು ಖಚಿತಪಡಿಸಿದ್ದಾರೆ. "ಶಿಲ್ಪಾ ನಮ್ಮ ಕಾರ್ಯಕ್ರಮದ ಜಡ್ಜ್. ಅವರು ಮತ್ತೆ ಆಗಮಿಸಿದ್ದಾರೆ" ಎಂದು ಹೇಳಿದ್ದಾರೆ.