ಹೈದರಾಬಾದ್: ಈಗ ಎಲ್ಲೆಲ್ಲೂ ನವರಾತ್ರಿ ಹಬ್ಬದ ಸಂಭ್ರಮ. ನಟಿ ಶಿಲ್ಪಾ ಶೆಟ್ಟಿ ಕುಟುಂಬದಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ಮಕ್ಕಳ ಜೊತೆ ಸೇರಿ ಅವರು ಸಡಗರದಿಂದ ಹಬ್ಬ ಆಚರಿಸಿದ್ದಾರೆ. ದೇವರಿಗೆ ವಿಶೇಷ ಅಲಂಕಾರ, ನೈವೇದ್ಯ ಮಾಡಿ, ಅಷ್ಟಮಿ ಪೂಜೆ ನೆರವೇರಿಸಿದ್ದಾರೆ. ಈ ವಿಡಿಯೋವನ್ನು ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಸಂಭ್ರಮ: ವಿಡಿಯೋ ಹಂಚಿಕೊಂಡು 'ಹ್ಯಾಪಿ ಕಂಜಕ್ ಪೂಜಾ' ಎಂದ ನಟಿ - ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ಮಕ್ಕಳ ಜೊತೆ ಸೇರಿ ಅವರು ಸಡಗರದಿಂದ ಹಬ್ಬ ಆಚರಿಸಿದ್ದು, ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪೂಜಾ ವಿಡಿಯೋದಲ್ಲಿ ಎಲ್ಲಿಯೂ ಅವರ ಪತಿ ರಾಜ್ ಕುಂದ್ರಾ ಕಾಣಿಸಿಕೊಂಡಿಲ್ಲ.
ಮನೆಯಲ್ಲಿ ತಮ್ಮ ಕೈಯಾರೆ ಚಿಕ್ಕಮಕ್ಕಳಿಗೆ ಊಟ ಬಡಿಸಿ ಆರತಿ ಮಾಡಿ ಸೇವೆ ಸಲ್ಲಿಸಿ ಹಬ್ಬವನ್ನು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಚಿಕ್ಕ ಹುಡುಗಿಯರ ಪೂಜೆ ಮಾಡುತ್ತಿರುವ ಮತ್ತು ಔತಣಕೂಟದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಂಡ ಶಿಲ್ಪಾ ಶೆಟ್ಟಿ, 'ಹ್ಯಾಪಿ ಕಂಜಕ್ ಪೂಜಾ, ಜೈ ಮಾತಾ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ, ಶಿಲ್ಪಾ ತನ್ನ ಮಗಳು ಸಮೀಷಾ ಮತ್ತು ಮಗ ವಿಯಾನ್ ಜೊತೆ ಕಾಣಿಸಿಕೊಂಡಿದ್ದಾರೆ, ಆದರೆ ಶಿಲ್ಪಾ ಪತಿ ರಾಜ್ ಕುಂದ್ರಾ ಈ ವಿಡಿಯೋದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಹಿಂದೆಯೂ ಕೂಡ ಶಿಲ್ಪಾ ಶೆಟ್ಟಿ ಅವರು ಗಣೇಶ ಚತುರ್ಥಿ ಪೂಜೆಯ ಚಿತ್ರಗಳನ್ನು ಹಂಚಿಕೊಂಡಿದ್ದರು.