ಕರ್ನಾಟಕ

karnataka

ETV Bharat / sitara

ದಾಖಲೆ ನಿರ್ಮಿಸಿದ Shershaah.. ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ ಸಿದ್ಧಾರ್ಥ್ - ಕಿಯಾರಾ - ಅತೀ ಹೆಚ್ಚು ವೀಕ್ಷಿಸಿದ ಸಿನಿಮಾ

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ನಟನೆಯ 'ಶೇರ್​ ಷಾ' ಚಿತ್ರವು ಅಮೆಜಾನ್​ ಪ್ರೈಮ್​​ನಲ್ಲಿ 'ಅತೀ ಹೆಚ್ಚು ವೀಕ್ಷಿಸಿದ ಸಿನಿಮಾ'ವಾಗಿ ಹೊರಹೊಮ್ಮಿದೆ.

ಸಿದ್ಧಾರ್ಥ್-ಕಿಯಾರಾ
ಸಿದ್ಧಾರ್ಥ್-ಕಿಯಾರಾ

By

Published : Aug 31, 2021, 7:52 PM IST

ಮುಂಬೈ: ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ನಟನೆಯ 'ಶೇರ್​ ಷಾ' ಸಿನಿಮಾ ಪ್ರಪಂಚದಾದ್ಯಂತ 120 ದೇಶಗಳು ಹಾಗೂ 41,000 ನಗರಗಳ ಜನರ ಮನಗೆದ್ದಿದ್ದು, ಅಮೆಜಾನ್​ ಪ್ರೈಮ್​​ನಲ್ಲಿ 'ಅತೀ ಹೆಚ್ಚು ವೀಕ್ಷಿಸಿದ ಸಿನಿಮಾ' ಎಂಬ ಬಿರುದು ಪಡೆದು ದಾಖಲೆ ನಿರ್ಮಿಸಿದೆ.

ಪ್ರೀತಿ ನೀಡಿದ ಪ್ರೇಕ್ಷಕರಿಗೆ ಸಿದ್ಧಾರ್ಥ್ ಮತ್ತು ಕಿಯಾರಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಚಿತ್ರದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪಾತ್ರದಲ್ಲಿ ನಟಿಸಿದ್ದ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, "ಶೇರ್‌ ಷಾ ಚಿತ್ರಕ್ಕಾಗಿ ನಾವು ಪ್ರೀತಿ ಮತ್ತು ಮೆಚ್ಚುಗೆ ಸ್ವೀಕರಿಸುತ್ತಿದ್ದೇವೆ. ಅಮೆಜಾನ್​ ಪ್ರೈಮ್​​ನಲ್ಲಿ 'ಅತೀ ಹೆಚ್ಚು ವೀಕ್ಷಿಸಿದ ಸಿನಿಮಾ'ವನ್ನಾಗಿ ಮಾಡಿದ ಎಲ್ಲರಿಗೂ ಧನ್ಯವಾದಗಳು. ಯೆ ದಿಲ್​ ಮಾಂಗೆ ಮೋರ್" ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: "ಬಾತ್ರಾ ಜೊತೆ ಡಿಂಪಲ್​ ಕಳೆದಿದ್ದು ಕೇವಲ 40 ದಿನ".. 'ಅಮರ' ಪ್ರೇಮದ ಕಹಾನಿ ಬಿಚ್ಚಿಟ್ಟ ಸಂದೀಪ್​ ಶ್ರೀವಾಸ್ತವ್

ಡಿಂಪಲ್ ಚೀಮಾ ಪಾತ್ರದಲ್ಲಿ ನಟಿಸಿದ್ದ ಕಿಯಾರಾ ಅಡ್ವಾಣಿ, ಶೇರ್‌ ಷಾ ಸಿನಿಮಾಗಾಗಿ ನೀವು ನಮ್ಮ ಮೇಲೆ ತೋರಿಸಿದ ಪ್ರೀತಿ, ಗೌರವ ಮತ್ತು ಮೆಚ್ಚುಗೆಗೆ ಧನ್ಯವಾದಗಳು ಎಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಷ್ಣು ವರಧನ್ ನಿರ್ದೇಶಿಸಿದ 'ಶೇರ್​ ಷಾ', ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಮ್ ಬಾತ್ರಾರ ಜೀವನಾಧಾರಿತ ಚಿತ್ರವಾಗಿದೆ. ಕೋವಿಡ್​ನಿಂದಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾ IMDb ನಲ್ಲಿ 8.9 ರೇಟಿಂಗ್‌ ಗಳಿಸಿದೆ.

ABOUT THE AUTHOR

...view details