ಕರ್ನಾಟಕ

karnataka

ETV Bharat / sitara

'ಶೇರ್ ಷಾ​' ಕೇವಲ ಚಿತ್ರವಲ್ಲ, ಇದು ಭಾವನೆ: ಕರಣ್ ಜೋಹರ್ - ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್

1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ 13 ನೇ ಬೆಟಾಲಿಯನ್‌ನ ಸೈನ್ಯದ ಉಸ್ತುವಾರಿಯನ್ನು ವಹಿಸಿ, ಭೂಮಿಯಲ್ಲೇ ವೀರಮರಣವನ್ನಪ್ಪಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಕಥೆಯನ್ನು ಒಳಗೊಂಡ 'ಶೇರ್ ಷಾ ​' ಕೇವಲ ಚಿತ್ರವಲ್ಲ, ಇದು ಭಾವನೆ ಎಂದು ನಿರ್ಮಾಪಕ ಕರಣ್ ಜೋಹರ್ ತಿಳಿಸಿದ್ದಾರೆ.

ಕರಣ್ ಜೋಹರ್
ಕರಣ್ ಜೋಹರ್

By

Published : Jul 26, 2021, 10:07 AM IST

ಮಾತೃಭೂಮಿಯ ಸೇವೆಗಾಗಿ ಸೇನೆ ಸೇರಿದ ಎರಡೇ ವರ್ಷದಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡುವ ಮೂಲಕ ತಾಯಿ ನೆಲದ ಋಣ ತೀರಿಸುವ ಅಪೂರ್ವ ಅವಕಾಶವನ್ನು ತನ್ನದಾಗಿಸಿಕೊಂಡು, ಕೆಚ್ಚೆದೆಯಿಂದ ಹೋರಾಡಿ ಯುದ್ಧ ಭೂಮಿಯಲ್ಲೇ ವೀರಮರಣವನ್ನಪ್ಪಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಕಥೆಯನ್ನು'ಶೇರ್ ಷಾ' ಮೂಲಕ ಹೊರತರುತ್ತಿರುವುದು ನನ್ನ ಭಾಗ್ಯ ಎಂದು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಹೇಳಿದ್ದಾರೆ.

ಕ್ಯಾಪ್ಟನ್ ಬಾತ್ರಾ ಅವರು 1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ 13 ನೇ ಬೆಟಾಲಿಯನ್‌ನ ಉಸ್ತುವಾರಿ ವಹಿಸಿದ್ದರು. ಮರಣೋತ್ತರವಾಗಿ ಅವರಿಗೆ ಅತ್ಯುನ್ನತ ಯುದ್ಧ ಕಾಲದ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕಾರ್ಗಿಲ್​ ವಿಜಯ್ ದಿವಾಸ್ ಹಿನ್ನೆಲೆ ನಿನ್ನೆ ಡ್ರಾಸ್ ಪಟ್ಟಣದ ನ್ಯಾಷನಲ್ ಹಾರ್ಸ್ ಪೊಲೊ ಮೈದಾನದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ, 'ಶೇರ್ ಷಾ ' ಸಿನಿಮಾದ ಕುರಿತು ಮಾಹಿತಿ ನೀಡಿದ ಕರಣ್ ಜೋಹರ್, ಇದು ಕೇವಲ ಚಿತ್ರವಲ್ಲ, ಒಂದು ಭಾವನೆ. ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಕಥೆಯಾಗಿದೆ. ಕಥೆಯನ್ನು ಹೇಳುವ ಭಾಗ್ಯ ನಮಗೆ ದೊರೆತಿರುವುದು ನಮ್ಮ ಪುಣ್ಯ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮತ್ತು ಅವರ ಸಹೋದರ ವಿಶಾಲ್ ಬಾತ್ರಾ ದ್ವಿಪಾತ್ರದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಂಡಿದ್ದಾರೆ ಎಂದರು.

ಇನ್ನು ಇದೇ ವೇಳೆ ಕಥೆಯನ್ನು ನಿರೂಪಿಸಲು ಸಹಾಯ ಮಾಡಿದ ಕ್ಯಾಪ್ಟನ್ ಬಾತ್ರಾ ಅವರ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು. 'ಶೇರ್ ಷಾ ' ಚಿತ್ರವು ಆಗಸ್ಟ್ 12 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

ABOUT THE AUTHOR

...view details