ಮುಂಬೈ :ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ನಟ ಹಾಗೂ ಸಂಸತ್ ಸದಸ್ಯರಾಗಿರುವ ಶೇಖರ್ ಸುಮನ್ ಮತ್ತು ರೂಪಾ ಗಂಗೂಲಿ ಒತ್ತಾಯಿಸಿದ್ದಾರೆ.
ಸುಶಾಂತ್ ಅವರ ಸಾವಿನ ಪ್ರಕರಣದ ಬಗ್ಗೆ ಸಿಬಿಐ ವಿಚಾರಣೆಯನ್ನು ಪ್ರಾರಂಭಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಶೇಖರ್ ಸುಮನ್ ಸಾಮಾಜಿಕ ಮಾಧ್ಯಮದಲ್ಲಿ ವೇದಿಕೆ ರಚಿಸಿದ್ದಾರೆ.
"ನಾನು ಜಸ್ಟೀಸ್ ಫಾರ್ ಸುಶಾಂತ್ ಫೋರಂ ರಚಿಸುತ್ತಿದ್ದೇನೆ. ಸುಶಾಂತ್ ಸಾವಿನ ಬಗ್ಗೆ ಸಿಬಿಐ ವಿಚಾರಣೆಯನ್ನು ಪ್ರಾರಂಭಿಸಲು ಸರ್ಕಾರಕ್ಕೆ ಒತ್ತಡ ಹೇರಲು ಈ ವೇದಿಕೆ ರಚಿಸಲಾಗಿದೆ. ಇದಕ್ಕೆ ನಿಮ್ಮ ಬೆಂಬಲವನ್ನು ಕೋರುತ್ತೇನೆ" ಎಂದು ಶೇಖರ್ ಸುಮನ್ ಟ್ವಿಟರ್ನಲ್ಲಿ ಬರೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದ್ದಾರೆ. ಜೊತೆಗೆ ರೂಪಾ ಗಂಗೂಲಿ ಕೂಡಾ ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಹಲವಾರು ಟ್ವೀಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
"ಸುಶಾಂತ್ ಸಾವಿಗೆ ಖಿನ್ನತೆಯೇ ಕಾರಣ ಎಂದು ಕಡೆಗೆ ಬೆರಳು ತೋರಿಸುವುದರೊಂದಿಗೆ ಬಹುಶಃ ನಾವು ಅವರ ನಿಧನಕ್ಕೆ ನಿಜವಾದ ಕಾರಣವನ್ನು ಅರಿಯುತ್ತಲ್ಲ. ನಾವದನ್ನು ನಿಜವಾಗಿಯೂ ನೋಡಬೇಕಲ್ಲವೇ ಅಥವಾ ಅದನ್ನು ಆತ್ಮಹತ್ಯೆಯೆಂದು ಭಾವಿಸಬೇಕೇ" ಎಂದು ಅವರು ಬರೆದಿದ್ದಾರೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದಿದ್ದಾರೆ.