ಹೈದರಾಬಾದ್ (ತೆಲಂಗಾಣ):ಬಿಗ್ಬಾಸ್ ಖ್ಯಾತಿಯ ಶೆಹ್ನಾಜ್ ಗಿಲ್ ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿದ್ದು, ಬಾಲಿವುಡ್‌ನ ನೆಚ್ಚಿನ ಛಾಯಾಗ್ರಾಹಕ ದಬೂ ರತ್ನಾನ್ ಫೋಟೋಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿರುವ ಶೆಹ್ನಾಜ್ ಗಿಲ್ ಅವರ ಫೋಟೋಗಳನ್ನು ಹವ್ಯಾಸಿ ಛಾಯಾಗ್ರಾಹಕ ದಬೂ ರತ್ನಾನ್ ಕ್ಲಿಕ್ ಮಾಡಿರೋದು ವಿಶೇಷ.
ಈ ಫೋಟೋಗಳನ್ನು ಶೆಹ್ನಾಜ್ ಗಿಲ್ ಇಂದು ಇನ್ಸ್ಟಾಗೆ ಅಪ್ಲೋಡ್ ಮಾಡಿದ್ದಾರೆ. ಬ್ಲ್ಯಾಕ್ ಮತ್ತು ಹಸಿರು ಬಣ್ಣದ ಉಡುಪಿನಲ್ಲಿ ಶೆಹ್ನಾಜ್ ಗಿಲ್ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಶೆಹ್ನಾಜ್ ಹೆಚ್ಚು ಮೇಕ್ಅಪ್ ಮಾಡದೇ ಸರಳ ಸುಂದರಿಯಾಗಿ ಮಿಂಚಿದ್ದಾರೆ.