ಮುಂಬೈ(ಮಹಾರಾಷ್ಟ್ರ):ಬಾಲಿವುಡ್ನ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ 77ನೇ ವರ್ಷಕ್ಕೆ ಕಾಲಿಟ್ಟಿದ್ದು, ಸೊಸೆ ಕರೀನಾ ಕಪೂರ್ ಖಾನ್, ಮೊಮ್ಮಗಳು ಸಾರಾ ಅಲಿ ಖಾನ್ ಮತ್ತು ಪುತ್ರಿ ಸೋಹಾ ಅಲಿ ಖಾನ್ ಸೇರಿದಂತೆ ಕುಟುಂಬದ ಸದಸ್ಯರು ಸಾಮಾಜಿಕ ಮಾಧ್ಯಮದಲ್ಲಿ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
ನಟಿ ಕರೀನಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶರ್ಮಿಳಾ ಅವರು ನಟಿಸಿದ್ದ ಅಮರ್ ಪ್ರೇಮ್ ಸಿನಿಮಾದ ಕಪ್ಪು-ಬಿಳುಪಿನ ಚಿತ್ರವನ್ನು ಪೋಸ್ಟ್ ಮಾಡಿ 'ನನ್ನ ಸುಂದರ ಅತ್ತೆಗೆ ಜನ್ಮದಿನದ ಶುಭಾಶಯಗಳು.. ಐಕಾನಿಕ್' ಎಂದು ಬರೆದುಕೊಂಡರೆ, ಮಗಳು ಸೋಹಾ ಅಲಿಖಾನ್ ತನ್ನ ತಾಯಿಯೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿ, 'ಗಿಡದಲ್ಲಿನ ಆ್ಯಪಲ್ಗೆ ಹ್ಯಾಪಿ ಬರ್ತಡೇ' ಎಂಬ ಸೊಗಸಾದ ಸಾಲುಗಳನ್ನು ಬರೆದುಕೊಂಡಿದ್ದಾರೆ.