ಬೆಂಗಳೂರು :ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ವಂಚನೆಗಳಾದರೆ ಅದು ಹೆಚ್ಚಾಗಿ ನಿರ್ಮಾಪಕನಿಗೆ ಸಂಬಂಧಿಸಿರುತ್ತದೆ. ನಿರ್ಮಾಪಕ ಮೋಸ ಹೋಗಿರುವುದು ಅಥವಾ ನಿರ್ಮಾಪಕನೇ ಮೋಸ ಮಾಡಿರುವ ಪ್ರಕರಣಗಳು ಇರುತ್ತವೆ. ಆದರೆ, ಈ ಪ್ರಕರಣದಲ್ಲಿ ನಿರ್ದೇಶಕರೊಬ್ಬರು ನಿರ್ಮಾಪಕರಿಗೆ ಸಿನಿಮಾದ ದೃಶ್ಯದ ತುಣುಕುಗಳನ್ನ ನೀಡದೆ ಸತಾಯಿಸುತ್ತಿದ್ದಾರೆ.
ಶಾರ್ದೂಲ ಸಿನಿಮಾ ನಿರ್ಮಾಪಕ ರೋಹಿತ್ ಅವರು ತಮ್ಮ ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಶಾರ್ದೂಲ ಸಿನಿಮಾ ಭೈರವ ಸಿನಿಮಾಸ್ ಪ್ರೊಡಕ್ಷನ್ನಲ್ಲಿ ತೆರೆಗೆ ಸಿದ್ಧವಾಗಿದೆ. ಹುಲಿರಾಯ ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಅವರು ಶಾರ್ದೂಲ ಚಿತ್ರವನ್ನ ನಿರ್ದೇಶಿಸಿದ್ದಾರೆ.
ಸದ್ಯ ಈ ಚಿತ್ರದ ಆಡಿಯೋ ಲಾಂಚ್ ಆಗಿದೆ. ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ಸಿನಿಮಾದ ತುಣುಕುಗಳನ್ನ ನಿರ್ದೇಶಕ ಕೌಶಿಕ್ ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡಿದ್ದಾರೆ. ಸಿನಿಮಾ ಪ್ರಮೋಷನ್ಗೆ ಬೇಕಾದ ಚಿತ್ರೀಕರಣದ ಮೇಕಿಂಗ್ ವಿಡಿಯೋಗಳನ್ನ ನೀಡುತ್ತಿಲ್ಲ ಎಂದು ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ.