ಕರ್ನಾಟಕ

karnataka

ETV Bharat / sitara

'ಕರೋ ಮತದಾನ್​'​​ ಎನ್ನುತ್ತಿದ್ದಾರೆ ಶಾರುಖ್​​​​​​​​​​​​​​​​​​​​​​​​: ಎಸ್​ಆರ್​​ಕೆ ಹಾಡಿಗೆ ಮೋದಿ ಮೆಚ್ಚುಗೆ - undefined

ಸದ್ಯಕ್ಕೆ ದೇಶಾದ್ಯಂತ ಲೋಕಸಭೆ ಚುನಾವಣೆ ಕಾವು ಆವರಿಸಿದೆ. ರಾಜ್ಯದಲ್ಲಿ ಏಪ್ರಿಲ್ 18 ರಂದು ಚುನಾವಣೆ ನಡೆದಿತ್ತು. ಏಪ್ರಿಲ್ 23, ಅಂದರೆ ನಾಳೆ ಮತ್ತೊಂದು ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ 11 ರಿಂದ ಮೇ 19 ವರೆಗೂ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.

'ಕರೋ ಮತದಾನ್​'​​ ಆಲ್ಬಂ

By

Published : Apr 22, 2019, 9:24 PM IST

ಎಲ್ಲರೂ ಮತದಾನ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರ ನಾನಾ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಚುನಾವಣೆ ಸಂಧರ್ಭದಲ್ಲಿ ಮಾಡುತ್ತಲೇ ಇರುತ್ತದೆ. ಚಲನಚಿತ್ರ ನಟರು, ಕಿರುತೆರೆ ನಟರು, ಕ್ರೀಡಾತಾರೆಯರು ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಹೆಸರು ಮಾಡಿದವರ ಮೂಲಕ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಸೆಲಬ್ರಿಟಿಗಳು ತಪ್ಪದೆ ಓಟು ಮಾಡಲು ಜನರಲ್ಲಿ ಮನವಿ ಮಾಡುತ್ತಲೇ ಇರುತ್ತಾರೆ.

ಇದೀಗ ಬಾಲಿವುಡ್ ಹೀರೋ ಶಾರುಖ್ ಖಾನ್ ಕೂಡಾ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 'ಕರೋ ಮತದಾನ್​'​​ ಎಂಬ 1:06 ನಿಮಿಷದ ವಿಡಿಯೋ ಆಲ್ಬಂ ಒಂದನ್ನು 'ದಿ ಕ್ಯೂರಿಯಸ್ ಮುಸ್ಟಾಚ್ ಎಂಟರ್​​​​ಟೈನ್ಮೆಂಟ್' ಎಂಬ ಸಂಸ್ಥೆ ತಯಾರಿಸಿದೆ. ವಿಶೇಷ ಎಂದರೆ ಈ ಹಾಡನ್ನು ಸ್ವತ: ಶಾರುಖ್​​​​​ ಖಾನ್ ಹಾಡಿದ್ದಾರೆ. ತನಿಷ್ ಭಾಗ್ಚಿ ಸಂಗೀತ ಸಂಯೋಜಿಸಿದ್ದರೆ ಪರಾಕ್ರಮ್ ಸಿಂಗ್ ರಾಥೋರ್ ಆಲ್ಬಂ ಹಾಡನ್ನು ನಿರ್ದೇಶಿಸಿದ್ದಾರೆ.

ಈ ಆಲ್ಬಂ ಹಾಡಿಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​​ನಲ್ಲಿ ಶಾರುಖ್​​​​ಗೆ ರಿಪ್ಲೇ ನೀಡಿರುವ ಮೋದಿ 'ಭಾರತದ ಪ್ರಜೆಗಳು, ಅದರಲ್ಲೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು ನಿಮ್ಮ ಮಾತಿಗೆ ಬೆಲೆ ಕೊಟ್ಟು ಮತಗಟ್ಟೆಗೆ ಬಂದು ಖಂಡಿತ ಓಟು ಮಾಡುತ್ತಾರೆ ಎಂಬ ವಿಶ್ವಾಸ ನನಗೆ ಇದೆ' ಎಂದು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details