ಕರ್ನಾಟಕ

karnataka

ETV Bharat / sitara

ರೈಲ್ವೆ ಸ್ಟೇಷನ್​ನಲ್ಲಿ ಎಷ್ಟೋ ಹುಡುಗಿಯರನ್ನು ಪ್ರೀತಿಸಿದ್ದೇನೆ: ಶಾರುಖ್ ಖಾನ್ - ಬಾಲಿವುಡ್ ನಟ ಶಾರುಖ್ ಖಾನ್

ನಾನು ಇದುವರೆಗೂ ಮುಂಬೈ ಬಾಂದ್ರಾ ರೈಲ್ವೆ ನಿಲ್ದಾಣವನ್ನು ನೋಡಿರಲಿಲ್ಲ. ಈ ದಿನ ಅದನ್ನೂ ನೋಡಿದ ಹಾಗೆ ಆಯ್ತು. ಆದ್ದರಿಂದ ನನ್ನ ಮುಂದಿನ ಸಿನಿಮಾದಲ್ಲಿ ರೈಲ್ವೆ ಸ್ಟೇಷನ್​​ನಲ್ಲಿ ಹುಡುಗಿಯನ್ನು ಪ್ರೀತಿಸುವ ಮತ್ತೊಂದು ದೃಶ್ಯವನ್ನು ಅಳವಡಿಸಿಕೊಳ್ಳುತ್ತೇನೆ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದಾರೆ.

ಶಾರುಖ್ ಖಾನ್

By

Published : Aug 24, 2019, 7:11 PM IST

ನನಗೂ ರೈಲ್ವೆ ಸ್ಟೇಷನ್​​ಗೂ ಅವಿನಾಭಾವ ಸಂಬಂಧವಿದೆ. ರೈಲ್ವೆ ನಿಲ್ದಾಣದಲ್ಲಿ ನಾನು ಸಾಕಷ್ಟು ಹುಡುಗಿಯರ ಪ್ರೀತಿಯ ಬಲೆಗೆ ಬಿದ್ದಿದ್ದೇನೆ ಎಂದು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹೇಳಿದ್ದಾರೆ.

'ದಿಲ್​ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಹಾಗೂ ಚೆನ್ನೈ ಎಕ್ಸ್​​​ಪ್ರೆಸ್ ದೃಶ್ಯ

ಅರೆ ಇದು ನಿಜಾನಾ ಎಂದು ಹುಬ್ಬೇರಿಸಬೇಡಿ. ಶಾರುಖ್ ಮಾತನಾಡಿರುವುದು ಸಿನಿಮಾ ಬಗ್ಗೆ. ಇದುವರೆಗೂ ಶಾರುಖ್ ಮುಂಬೈನ ಬಾಂದ್ರಾ ರೈಲ್ವೆ ಸ್ಟೇಷನ್ ನೋಡಿರಲಿಲ್ಲವಂತೆ. ಮುಂಬೈನ ಎಲ್ಲಾ ರೈಲ್ವೆ ನಿಲ್ದಾಣಗಳನ್ನು ನೋಡಿದ್ಧೇನೆ. ಆದರೆ ಬಾಂದ್ರಾ ಸ್ಟೇಷನ್ ನೋಡಿರಲಿಲ್ಲ. ಆದರೆ ಇಂದು ಅದನ್ನೂ ನೋಡಿದೆ. ರೈಲ್ವೆ ಸ್ಟೇಷನ್​ನಲ್ಲಿ ಹುಡುಗಿಯರ ಪ್ರೀತಿ ಬಲೆಗೆ ಬೀಳುವ ದೃಶ್ಯಗಳೇ ನನ್ನ ಕೆಲವೊಂದು ಸಿನಿಮಾಗಳಲ್ಲಿವೆ. ಈ ದಿನ ಬಾಂದ್ರಾ ರೈಲ್ವೆ ನಿಲ್ದಾಣವನ್ನು ನೋಡಿದ ಕಾರಣ ನನ್ನ ಮುಂದಿನ ಸಿನಿಮಾದಲ್ಲಿ ಈ ರೈಲ್ವೆ ಸ್ಟೇಷನ್​​ಗೆ ಮತ್ತೊಂದು ಹುಡುಗಿಯನ್ನು ಕರೆತಂದು ಪ್ರೀತಿಸುತ್ತೇನೆ ಎಂದು ತಮಾಷೆಯಾಗಿ ಹೇಳಿದ್ದಾರೆ.

ಶಾರುಖ್ ಖಾನ್

ಶಾರುಖ್ ನಟಿಸಿರುವ 'ದಿಲ್​ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದಲ್ಲಿ ಕಾಜಲ್​​ಗೆ ಕೈ ನೀಡಿ ಟ್ರೈನ್ ಒಳಗೆ ಹತ್ತಿಸಿಕೊಳ್ಳುವ ಸೀನ್ ಇಂದಿಗೂ ಫೇಮಸ್​​​. ಈ ಸಿನಿಮಾ ನಂತರ ಈ ರೈಲ್ವೆ ಸ್ಟೇಷನ್ ದೃಶ್ಯವನ್ನು ಬಹಳಷ್ಟು ಸಿನಿಮಾಗಳಲ್ಲಿ ಅಳವಡಿಸಿಕೊಂಡಿದ್ದಾರೆ. ನಂತರ ದಿಲ್ ಸೇ, ಚೆನ್ನೈ ಎಕ್ಸ್​​​ಪ್ರೆಸ್ ಸಿನಿಮಾಗಳಲ್ಲಿ ಕೂಡಾ ರೈಲ್ವೆ ನಿಲ್ದಾಣದ ಫೇಮಸ್ ದೃಶ್ಯಗಳಿವೆ.

ABOUT THE AUTHOR

...view details