ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ನಲ್ಲಿ ತಂದೆ ಮಗನ ಪ್ರೀತಿ ಕಾಣುತ್ತದೆ. ಮಗನಿಗೆ ಇಂಡಿಯನ್ ಜೆರ್ಸಿ ಅಂದ್ರೆ ಹುಚ್ಚು. ಅದನ್ನು ಪಡೆಯಲೇಬೇಕೆಂಬುದು ಮಗನ ಆಸೆ. ಮಗನ ಆಸೆಯಂತೆ ಹುಟ್ಟುಹಬ್ಬದಂದು ಉಡುಗೊರೆ ರೂಪದಲ್ಲಿ ಕೊಡಬೇಕೆಂಬುವುದು ತಂದೆಯ ಆಸೆ. ಆದ್ರೆ ಕೈಯಲ್ಲಿ ಹಣವಿಲ್ಲದೇ ಒದ್ದಾಡುತ್ತಿರುತ್ತಾರೆ ಶಾಹಿದ್ ಕಪೂರ್.
ತನ್ನ ಹೆಂಡ್ತಿಯ ಪರ್ಸ್ನಿಂದಲೇ ಕಳ್ಳತನಕ್ಕೆ ಮುಂದಾಗುತ್ತಾರೆ. ಕೊನೆಗೂ ತನ್ನ ಮಗನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುವುದಿಲ್ಲ. ಕೊನೆಗೂ ಒಂದು ತೀರ್ಮಾನಕ್ಕೆ ಬಂದ ಶಾಹಿದ್ ತನ್ನ ಮಗನಿಗಾಗಿ ನಿಜವಾದ ಇಂಡಿಯನ್ ಜೆರ್ಸಿ ಕೊಡಲು ನಿರ್ಧರಿಸುತ್ತಾರೆ. ಅದಕ್ಕಾಗಿ ಅರ್ಧಕ್ಕೆ ಮೊಟಕುಗೊಳಿಸಿದ್ದ ಕ್ರಿಕೆಟ್ ಆಟವನ್ನು ಮುಂದುವರಿಸುತ್ತಾರೆ. ಹೀಗೆ ಚಿತ್ರ ಸಾಗುತ್ತದೆ. ಕೊನೆಗೂ ತನ್ನ ಮಗನಿಗೆ ಇಂಡಿಯನ್ ಜೆರ್ಸಿ ಕೊಡ್ತಾರೆ ಅಥವಾ ಇಲ್ವಾ ಅನ್ನೋದು ಚಿತ್ರದ ಕಥಾಹಂದರವಾಗಿದೆ.