ಹೈದರಾಬಾದ್:ಬಾಲಿವುಡ್ನ ಚಾಕಲೇಟ್ ಲುಕ್ ನಟ ಶಾಹಿದ್ ಕಪೂರ್ಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ. ದೆಹಲಿಯಲ್ಲಿ ಶಾಹಿದ್ ಕಪೂರ್ ಜನಿಸಿದ್ದು, ಅವರು ನಟ ಪಂಕಜ್ ಕಪೂರ್ ಅವರ ಹಿರಿಯ ಮಗ. ಶಾಹಿದ್ ಅವರು ಬಾಲಿವುಡ್‌ನಲ್ಲಿ ಸ್ಟಾರ್ಡಮ್ಗಳಿಸಲು ಐದು ಸಿನಿಮಾಗಳೇ ಕಾರಣವೆಂದು ಹೇಳಲಾಗುತ್ತದೆ. ಈ ಸಿನಿಮಾಗಳಲ್ಲಿ ಶಾಹಿದ್ ತಮ್ಮ ನಟನೆಯಿಂದ ಬಾಕ್ಸ್ ಆಫೀಸ್‌ನಲ್ಲಿ ತಲ್ಲಣ ಮೂಡಿಸಿದ್ದಾರೆ.
ಜಬ್ ವಿ ಮೆಟ್ (2007): ಶಾಹಿದ್ ಕಪೂರ್ ಇಷ್ಕ್-ವಿಷ್ಕ್ (2003) ಚಿತ್ರದ ಮೂಲಕ ನಟನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಆರಂಭಿಕ ಹಂತದಲ್ಲಿ 10 ಚಿತ್ರಗಳನ್ನು ಮಾಡಿದ್ರೂ, ಶಾಹಿದ್‌ಗೆ ಸ್ಟಾರ್ ಪಟ್ಟ ಸಿಕ್ಕಿರಲಿಲ್ಲ. ಇದೇ ಸಮಯದಲ್ಲಿ 2007 ರಲ್ಲಿ ಇಮ್ತಿಯಾಜ್ ಅಲಿ ನಿರ್ದೇಶನದ ಜಬ್ ವಿ ಮೆಟ್ ಚಿತ್ರವು ಶಾಹಿದ್ ಕಪೂರ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಆದಾಗ್ಯೂ 2006 ರ ಆರಂಭದಲ್ಲಿ ಶಾಹಿದ್ ಕಪೂರ್ ವಿವಾಹ ಚಿತ್ರದ ಮೂಲಕ ಸಾಕಷ್ಟು ಪ್ರಶಂಸೆಯನ್ನು ಗಳಿಸಿದರು.
ಕಮೀನೆ (2009): 2009 ರಲ್ಲಿ ಬಿಡುಗಡೆಯಾದ ವಿಶಾಲ್ ಭಾರದ್ವಾಜ್ ಅವರ ಚಿತ್ರ ಕಮೀನೆಯಲ್ಲಿ ಶಾಹಿದ್ ನಟಿಸಿದರು. ಈ ಚಿತ್ರದಲ್ಲಿ ಶಾಹಿದ್, ಚಾರ್ಲಿ ಶರ್ಮಾ ಮತ್ತು ಗುಡ್ಡು ಶರ್ಮಾ ಎಂಬ ಎರಡು ಪಾತ್ರಗಳಲ್ಲಿ ತಮ್ಮ ಕೌಶಲ್ಯವನ್ನು ತೋರಿಸಿದರು. ವಿಮರ್ಶಕರು ಕೂಡ ಈ ಚಿತ್ರವನ್ನು ತುಂಬಾ ಇಷ್ಟಪಟ್ಟಿದ್ದಾರೆ.
ಹೈದರ್ (2014): 2009 ರಿಂದ 2013 ರ ವರೆಗೆ ಶಾಹಿದ್ ಕಪೂರ್ 8 ಫ್ಲಾಪ್ ಸಿನಿಮಾಗಳನ್ನು ನೀಡಿದರು. ಇದರಲ್ಲಿ ದಿಲ್ ಬೋಲೆ ಹಡಿಪ್ಪಾ, ಚಾನ್ಸ್ ಪೆ ಡ್ಯಾನ್ಸ್, ಪಾಠಶಾಲಾ, ಬದ್ಮಾಶ್ ಕಂಪನಿ, ಮಿಲೇಂಗೆ-ಮಿಲೇಂಗೆ, ಮೌಸಂ, ತೇರಿ ಮೇರಿ ಕಹಾನಿ ಮತ್ತು ಫಾಟಾ ಪೋಸ್ಟರ್ ನಿಕ್ಲಾ ಹೀರೋ ಸೇರಿವೆ. 2014 ರಲ್ಲಿ, ವಿಶಾಲ್ ಭಾರದ್ವಾಜ್ ಅವರ ಹೈದರ್ ಚಿತ್ರದ ಮೂಲಕ ಶಾಹಿದ್ ಮತ್ತೊಮ್ಮೆ ಕಮಾಲ್ ಮಾಡಿದರು.