ಕರ್ನಾಟಕ

karnataka

ETV Bharat / sitara

ಕೊನೆಗೂ ಒಲಿದು ಬಂದ ಶಾಹಿದ್ ಅಭಿನಯದ 'ಜೆರ್ಸಿ' ಚಿತ್ರಕ್ಕೆ ಬಿಡುಗಡೆ ಭಾಗ್ಯ - ಏಪ್ರಿಲ್​ ತಿಂಗಳಲ್ಲಿ ಶಾಹಿದ್ ಅಭಿನಯದ ಜೆರ್ಸಿ ಚಿತ್ರ ಬಿಡುಗಡೆ

ಚಿತ್ರದ ನಿರ್ಮಾಪಕ ದಿಲ್ ರಾಜು ಪ್ರೊಡಕ್ಷನ್ಸ್ ಅವರ ಟ್ವೀಟ್ ಮಾಡಿದ್ದು, "#ಜೆರ್ಸಿ ಏಪ್ರಿಲ್ 14, 2022 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ." ಎಂದು ಬರೆದುಕೊಂಡಿದೆ.

ಶಾಹಿದ್ ಕಪೂರ್
ಶಾಹಿದ್ ಕಪೂರ್

By

Published : Feb 15, 2022, 10:39 PM IST

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಜೆರ್ಸಿ' ಚಿತ್ರ ಬಿಡುಗಡೆ ದಿನಾಂಕವನ್ನ ಚಿತ್ರ ತಂಡ ಘೋಷಣೆ ಮಾಡಿದೆ. ಈ ಚಿತ್ರ ಏಪ್ರಿಲ್​​ 14 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ತಮ್ಮ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಈ ಚಿತ್ರ ಕಳೆದ ವರ್ಷ ಡಿಸೆಂಬರ್ 31 ರಂದು ತೆರೆಗೆ ಬರಬೇಕಿತ್ತು. ಆದರೆ, ದೇಶದಲ್ಲಿ ಒಮಿಕ್ರಾನ್​ ಪ್ರಕರಣ ಹೆಚ್ಚಾಗಿ ದಾಖಲಾಗುತ್ತಿರುವ ಕಾರಣ ಚಿತ್ರಮಂಡಳಿ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಿತ್ತು.

ಚಿತ್ರದ ನಿರ್ಮಾಪಕ ದಿಲ್ ರಾಜು ಪ್ರೊಡಕ್ಷನ್ಸ್ ಅವರ ಟ್ವೀಟ್ ಮಾಡಿದ್ದು, "#ಜೆರ್ಸಿ ಏಪ್ರಿಲ್ 14, 2022 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ." ಎಂದು ಬರೆದುಕೊಂಡಿದೆ. 'ಈ ಚಿತ್ರದಲ್ಲಿ ಶಾಹಿದ್ ಜೊತೆಗೆ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಈ ಚಿತ್ರ 2019ರಲ್ಲಿ ತೆಲುಗಿನಲ್ಲಿ ತೆರೆಕಂಡ ಜೆರ್ಸಿ ಚಿತ್ರದ ರಿಮೇಕ್​​ ಆಗಿದೆ. ಈ ಚಿತ್ರದಲ್ಲಿ ನಾನಿ, ಶ್ರದ್ಧಾ ಶ್ರೀನಾಥ್ ಸೇರಿದಂತೆ ಅನೇಕರು ಅಭಿನಯಸಿದ್ದರು.

ABOUT THE AUTHOR

...view details