ಹೈದರಾಬಾದ್(ತೆಲಂಗಾಣ):ಬಾಲಿವುಡ್ ನಟ ಶಾಹೀದ್ ಕಪೂರ್ ಪತ್ನಿ ಮೀರಾ ಕಪೂರ್ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು, ಅದರಲ್ಲಿ ಅವರು ಕಾಣಿಸಿಕೊಂಡ ರೀತಿಗೆ ಶಾಹಿದ್ ಕಪೂರ್ ಫಿದಾ ಆಗಿದ್ದಾರೆ. ಅಲ್ಲದೇ ಮೀರಾ ಮೇಲೆ ಮತ್ತೆ ಕ್ರಶ್ ಆಗಿದೆ ಎಂದು ಹೊಗಳಿದ್ದಾರೆ.
ನಟ ಶಾಹೀದ್ ಕಪೂರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪತ್ನಿ ಮೀರಾ ಕಪೂರ್ರ ಯೂಟೂಬ್ ಚಾನೆಲ್ನ ಪ್ರೋಮೋ ವಿಡಿಯೋವನ್ನು ಹಂಚಿಕೊಂಡು, 'ಮೈ ಲವ್..ಐ ಕ್ರಶಿಂಗ್ ಆನ್ ಯೂ..ಆಲ್ ಓವರ್ ಅಗೇನ್..' ಹದಿಹರೆಯದ ಹುಡುಗಿಯಂತೆ ಕಾಣುತ್ತಿದ್ದೀಯಾ' ಅಂತೆಲ್ಲಾ ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಾಹೀದ್ ಕಪೂರ್ ಸಹೋದರ ಕೂಡ ಮೀರಾಳ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.