ಇತ್ತೀಚೆಗಷ್ಟೇ ಹಿಂದಿಯ 'ಕಬೀರ್ ಸಿಂಗ್' ಟ್ರೇಲರ್ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಹಾಗೂ ಕೈರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೇಲರ್ ನೋಡುಗರನ್ನು ಇಂಪ್ರೆಸ್ ಮಾಡಿದ್ದಲ್ಲದೆ, ಅರ್ಜುನ್ ರೆಡ್ಡಿ ಸಿನಿಮಾದಂತೆ ಈ ಸಿನಿಮಾದಲ್ಲಿ ಕೂಡಾ ಚುಂಬನದ ದೃಶ್ಯಗಳು ಹೆಚ್ಚಾಗಿವೆ. ಟ್ರೇಲರ್ನಲ್ಲಿ ಕೂಡಾ ನೀವು ಇಂತಹ ದೃಶ್ಯಗಳನ್ನು ನೋಡಬಹುದು.
ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯ: ಕೈರಾಳನ್ನು ಪ್ರಶ್ನಿಸಿದ್ದಕ್ಕೆ ಶಾಹಿದ್ ಕೆಂಡಾಮಂಡಲ - undefined
ಟಾಲಿವುಡ್ ಬ್ಲಾಕ್ ಬಸ್ಟರ್ 'ಅರ್ಜುನ್ ರೆಡ್ಡಿ' ಸಿನಿಮಾ ತಮಿಳು ಹಾಗೂ ಹಿಂದಿಗೆ ರಿಮೇಕ್ ಆಗುತ್ತಿರುವುದು ತಿಳಿದಿರುವ ವಿಷಯ. ತಮಿಳಿನಲ್ಲಿ 'ಆದಿತ್ಯ ವರ್ಮಾ' ಹಿಂದಿಯಲ್ಲಿ 'ಕಬೀರ್ ಸಿಂಗ್' ಹೆಸರಿನಲ್ಲಿ ಸಿನಿಮಾ ತಯಾರಾಗುತ್ತಿದೆ. ಇದರಲ್ಲಿ ಎಷ್ಟು ಕಿಸ್ಸಿಂಗ್ ದೃಶ್ಯಗಳಿವೆ ಎಂದು ವರದಿಗಾರನೋರ್ವ ನಟಿ ಕೈರಾಳನ್ನು ಪ್ರಶ್ನಿಸಿದ್ದಕ್ಕೆ ನಟ ಶಾಹಿದ್ ಕಪೂರ್ ಸಿಡಿಮಿಡಿಗೊಂಡಿದ್ದಾರೆ.
ಇತ್ತೀಚೆಗೆ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ವರದಿಗಾರನೋರ್ವ ಕೈರಾ ಅಡ್ವಾಣಿಯನ್ನು ಕುರಿತು 'ಚಿತ್ರದಲ್ಲಿ ಎಷ್ಟು ಕಿಸ್ಸಿಂಗ್ ದೃಶ್ಯಗಳಿವೆ' ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೈರಾ, ನಾನು ಅದನ್ನು ಲೆಕ್ಕ ಮಾಡಲಿಲ್ಲ. ಅದನ್ನು ತಿಳಿಯಬೇಕೆಂದರೆ ನೀವು ಸಿನಿಮಾ ನೋಡಲೇಬೇಕು ಎಂದು ಉತ್ತರಿಸಿದ್ದಾರೆ. ಆದರೆ ಕೈರಾ ಉತ್ತರಕ್ಕೆ ಸಮಾಧಾನವಾಗದ ಪತ್ರಕರ್ತ ಮತ್ತೆ ಅದೇ ಪ್ರಶ್ನೆ ಕೇಳಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ಶಾಹಿದ್ ಕಪೂರ್ ಅವರು, ಪತ್ರಕರ್ತನ ಮೇಲೆ ಹರಿಹಾಯ್ದಿದ್ದಾರೆ. 'ನಿಮಗೆ ಗರ್ಲ್ಫ್ರೆಂಡ್ ಇಲ್ಲ ಅನ್ನಿಸುತ್ತಿದೆ. ನೀವು ಕಿಸ್ಸಿಂಗ್ ಸೀನ್ ನೋಡಬೇಕಿದ್ದಲ್ಲಿ ಸಿನಿಮಾ ನೋಡಬೇಕು. ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುವುದು ಸರಿಯಲ್ಲ. ಕಿಸ್ಸಿಂಗ್ ಬಗ್ಗೆ ಪ್ರಶ್ನೆ ಬಿಟ್ಟು ಬೇರೆ ಪ್ರಶ್ನೆ ಕೇಳಿ ಎಂದು ಶಾಹಿದ್ ಕೋಪದಿಂದ ಹೇಳಿದ್ದಾರೆ.
'ಕಬೀರ್ ಸಿಂಗ್' ಸಿನಿಮಾವನ್ನು ಸಿನಿ 1 ಸ್ಟುಡಿಯೋಸ್ ಪ್ರೊಡಕ್ಷನ್ ಬ್ಯಾನರ್ ಅಡಿ ಸಂದೀಪ್ ರೆಡ್ಡಿ ವೆಂಗ ನಿರ್ದೇಶಿಸಿದ್ದಾರೆ. ಜೂನ್ 21 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.