ಕರ್ನಾಟಕ

karnataka

ETV Bharat / sitara

ಮುಂಬೈ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡ ಬಾಲಿವುಡ್ ಸೆಲಬ್ರಿಟಿಗಳು - Sandeep Aur Pinky farar

ಪಾಪರಾಜಿಗಳು ಸೆಲಬ್ರಿಟಿಗಳು ಕಾಣಿಸಿಕೊಳ್ಳುತ್ತಿದ್ದಂತೆ ಆ ಅಪರೂಪದ ಕ್ಷಣವನ್ನು ಸೆರೆಹಿಡಿಯಲು ಯತ್ನಿಸುತ್ತಾರೆ. ಅದೇ ರೀತಿ ಮುಂಬೈ ವಿವಿಧ ಪ್ರದೇಶಗಳಲ್ಲಿ ವಿಕ್ಕಿ ಕೌಶಲ್, ಅರ್ಜುನ್ ಕಪೂರ್ ಹಾಗೂ ಶಾಹಿದ್ ಕಪೂರ್ ಕಾಣಿಸಿಕೊಂಡಿರುವ ವಿಡಿಯೋ ರಿವೀಲ್ ಆಗಿದೆ.

Bollywood celebrates
ಬಾಲಿವುಡ್ ಸೆಲಬ್ರಿಟಿಗಳು

By

Published : Mar 18, 2021, 9:00 AM IST

ಮುಂಬೈ: ಬಾಲಿವುಡ್ ನಟರಾದ ವಿಕ್ಕಿ ಕೌಶಲ್, ಅರ್ಜುನ್ ಕಪೂರ್ ಶಾಹಿದ್ ಕಪೂರ್ ಹಾಗೂ ಪತ್ನಿ ಮೀರಾ ಕಪೂರ್​​​ ಪಾಪರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಬಾಂದ್ರಾ ಹಾಗೂ ಜುಹು ಪ್ರದೇಶಗಳಲ್ಲಿ ಹೆಚ್ಚು ನೆಲೆಸಿರುವ ಸೆಲಬ್ರಿಟಿಗಳು ಆಗ್ಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಬಾಲಿವುಡ್ ಸೆಲಬ್ರಿಟಿಗಳು

ಇದನ್ನೂ ಓದಿ:ನಾಲ್ಕು ವರ್ಷಗಳ ಬಳಿಕ ಮತ್ತೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಸುಮಂತ್ ಶೈಲೇಂದ್ರ...!

ನಟ ವಿಕ್ಕಿ ಕೌಶಲ್ ಬಾಂದ್ರಾದ ಜಿಮ್ ಒಂದರ ಬಳಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ವಿಕ್ಕಿ ಕೌಶಲ್ ಸದ್ಯಕ್ಕೆ 'ಸರ್ದಾರ್ ಉಧಾಮ್ ಸಿಂಗ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ನಟ ಅರ್ಜುನ್ ಕಪೂರ್ ಕೂಡಾ ಕ್ಯಾಮರಾ ನೋಡಿದೊಡನೆ ಒಂದು ಕ್ಷಣ ನಿಂತು ಪೋಸ್ ನೀಡಿದ್ದಾರೆ. ಅರ್ಜುನ್ ಕಪೂರ್ ಸದ್ಯಕ್ಕೆ 'ಸಂದೀಪ್ ಔರ್​​ ಪಿಂಕಿ ಫರಾರ್' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್ 19 ರಂದು ತೆರೆ ಕಾಣುತ್ತಿದೆ. ಕಬೀರ್ ಸಿಂಗ್ ಖ್ಯಾತಿಯ ನಟ ಶಾಹಿದ್ ಕಪೂರ್ ಪತ್ನಿ ಮೀರಾ ಕಪೂರ್ ಜೊತೆ ಮುಂಬೈ ಏರ್​​​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾಹಿದ್ ಸದ್ಯಕ್ಕೆ 'ಜೆರ್ಸಿ' ಚಿತ್ರದಲ್ಲಿ ಬ್ಯುಸಿ ಇದ್ದಾರೆ.

ABOUT THE AUTHOR

...view details