ಕರ್ನಾಟಕ

karnataka

ETV Bharat / sitara

ತನ್ನನ್ನು ಮದುವೆ ಆಗುವಂತೆ ಶಾರುಖ್ ಖಾನ್ ಪುತ್ರಿಗೆ ಪ್ರಪೋಸಲ್​ ಕಳುಹಿಸಿದ ಯುವಕ!

ಯುವಕನೊಬ್ಬ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್​ಗೆ ತನ್ನನ್ನು ಮದುವೆ ಆಗುವಂತೆ ಟ್ವೀಟ್​ ಮಾಡಿದ್ದಾನೆ. ಹುಟ್ಟು ಹಬ್ಬದ ನಿಮಿತ್ತ ಸುಹಾನಾ ಖಾನ್​ಗೆ ಶುಭಾಶಯದ ಜೊತೆಗೆ ಈ ಪ್ರೇಮ ಸಂದೇಶ ಕಳುಹಿಸಿದ ವ್ಯಕ್ತಿಯ ಧೈರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Shah Rukh Khan's daughter #Suhana Khan gets a marriage proposal
ಸುಹಾನಾ ಖಾನ್

By

Published : May 27, 2021, 6:47 PM IST

ಮುಂಬೈ : ಬಾಲಿವುಡ್ ಬಾದ್​ಷಾ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್​ಗೆ ವ್ಯಕ್ತಿಯೊಬ್ಬ ತನ್ನನ್ನು ಮದುವೆ ಆಗುವಂತೆ ಪ್ರಪೋಸಲ್​ ಕಳುಹಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಈಗ ಭಾರಿ ವೈರಲ್​ ಆಗಿದೆ.

ಸುಹಾನಾ ಖಾನ್

ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಹೊಂದಿರುವ ಸುಹಾನಾ ಖಾನ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಸುಹಾನಾಗೆ ಶುಭಾಶಗಳ ಮಹಾಪೂರವೇ ಹರಿದು ಬಂದಿತ್ತು.

ಸುಹಾನಾ ಖಾನ್

ಸುಹಾನಾ ಖಾನ್​ಗೆ ಸೊಹೇಬ್ ಎಂಬ ಹೆಸರಿನ ಯುವಕ ತನ್ನನ್ನು ಮದುವೆ ಆಗುವಂತೆ ಪ್ರಪೋಸಲ್​ ಕಳುಹಿಸಿದ್ದಾನೆ. ನಾನು ಉತ್ತಮ ಕೆಲಸದಲ್ಲಿದ್ದೇನೆ. ನನಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಬರುತ್ತದೆ. ನಿಮ್ಮ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿಸುತ್ತೀರಾ ಎಂದು ಶಾರುಖ್ ಖಾನ್ ಅವರನ್ನು ಪ್ರಶ್ನೆ ಮಾಡಿದ್ದಾನೆ.

ಯುವಕನ ಕಾಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿದೆ. ಆತನ ಧೈರ್ಯ ನೋಡಿ ಕೆಲ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಹುಸಿನಗೆ ಬೀರಿದ್ದಾರೆ.

ಸುಹಾನಾ ಖಾನ್

ABOUT THE AUTHOR

...view details