ಅಕ್ಟೋಬರ್ 3 ರಂದು ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ನನ್ನು ಬಂಧಿಸಲಾಗಿತ್ತು. ಆಗ ಶಾರುಖ್ ಖಾನ್ ಕೆಟ್ಟ ಸಮಯವನ್ನು ಎದುರಿಸಬೇಕಾಯಿತು. ಮೂರು ವಾರಗಳ ನಂತರ ಮಗ ಆರ್ಯನ್ ಖಾನ್ ಜಾಮೀನಿನ ಮೇಲೆ ಹೊರಬಂದರೂ ನಟ ಜನಮನದಿಂದ ದೂರವಿದ್ದರು.
ಆದರೆ, ಶಾರುಖ್ ಈಗ ನಿಧಾನವಾಗಿ ತಮ್ಮ ಕೆಲಸಕ್ಕೆ ಮರಳುತ್ತಿದ್ದಾರೆ. ಕಳೆದ ತಿಂಗಳು ಈವೆಂಟ್ವೊಂದರಲ್ಲಿ ಕಾಣಿಸಿಕೊಂಡ ನಂತರ ಹಾಗೂ ಆರ್ಯನ್ಗೆ ಜಾಮೀನು ಸಿಕ್ಕ ಬಳಿಕ ಮೊದಲ ಬಾರಿಗೆ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಮಗ ಆರ್ಯನ್ ಖಾನ್ ಜೈಲಿನಲ್ಲಿದ್ದಾಗ ಶಾರುಖ್ ಖಾನ್ ತೀವ್ರ ಚಿಂತಿತರಾಗಿದ್ದರು. ಆದರೆ ಮಗನಿಗೆ ಜಾಮೀನು ದೊರೆತ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದು, ಶಾರುಖ್ ಆ್ಯಕ್ಟಿವ್ ಆಗಿದ್ದಾರೆ. ಜನವರಿ 19ರಂದು ನಟ ತನ್ನ ಪತ್ನಿ ಗೌರಿ ಖಾನ್ ಜೊತೆಗಿನ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.