ಸ್ಕ್ರೀಮ್ ಚಿತ್ರದಲ್ಲಿ ಹೊಸ, ಕಿರಿಯ ಪಾತ್ರವರ್ಗವನ್ನು ಪರಿಚಯಿಸಲಾಗಿದೆ. ಸೋಮವಾರದ ಶೋ ಸೇರಿದಂತೆ ಇದು ಒಟ್ಟು 35 ಮಿಲಿಯನ್ ಡಾಲರ್(2,59,56,35,000 ಕೋಟಿ ರೂ.) ಗಳಿಸಿದೆ ಎಂದು ಪ್ಯಾರಾಮೌಂಟ್ ಹೇಳಿದೆ. ಸ್ಕ್ರೀಮ್ ಚಿತ್ರಕ್ಕೆ ಸುಮಾರು 24 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎಂದು ತಿಳಿದು ಬಂದಿದೆ.
ಈ ಸ್ಕ್ರೀಮ್ ಆರಂಭಿಕ ಸರಣಿಯನ್ನು 2015 ರಲ್ಲಿ ನಿಧನರಾದ ವೆಸ್ ಕ್ರಾವೆನ್ ನಿರ್ದೇಶಿಸಿದ್ದರು. ಮೂಲ "ಸ್ಕ್ರೀಮ್" ಪಾತ್ರವರ್ಗದ ಸದಸ್ಯರಾದ ನೆವ್ ಕ್ಯಾಂಪ್ಬೆಲ್, ಕೋರ್ಟೆನಿ ಕಾಕ್ಸ್ ಮತ್ತು ಡೇವಿಡ್ ಆರ್ಕ್ವೆಟ್ ಜೊತೆಗೆ ಹೊಸ ಸೇರ್ಪಡೆಗಳಾದ ಮೆಲಿಸ್ಸಾ ಬ್ಯಾರೆರಾ, ಜೆನ್ನಾ ಒರ್ಟೆಗಾ ಮತ್ತು ಜ್ಯಾಕ್ ಕ್ವೈಡ್ ಚಿತ್ರದ ಪಾತ್ರದಾರಿಗಳಾಗಿದ್ದಾರೆ.
ಗಳಿಕೆಯಲ್ಲಿ ‘ಸ್ಪೈಡರ್-ಮ್ಯಾನ್: ನೋ ವೇ ಹೋಮ್’ ಎರಡನೇ ಸ್ಥಾನಕ್ಕೆ ಕುಸಿದಿದೆ. "ನೋ ವೇ ಹೋಮ್" ಬಿಡುಗಡೆಯಾದ ಐದನೇ ವಾರಾಂತ್ಯದಲ್ಲಿ $20.8 ಮಿಲಿಯನ್ ಗಳಿಸಿತ್ತು. ಯುನಿವರ್ಸಲ್ ಪಿಕ್ಚರ್ಸ್‌ನ ‘ಸಿಂಗ್ 2’ ನಾಲ್ಕನೇ ವಾರಾಂತ್ಯದಲ್ಲಿ $8.3 ಮಿಲಿಯನ್ ಗಳಿಸಿ ಮೂರನೇ ಸ್ಥಾನದಲ್ಲಿದೆ. ಅನಿಮೇಟೆಡ್ ಸೀಕ್ವೆಲ್ ದೇಶೀಯವಾಗಿ $122.1 ಮಿಲಿಯನ್ ಮತ್ತು ಅಂತಾರಾಷ್ಟ್ರೀಯವಾಗಿ 96.3 ಮಿಲಿಯನ್ ಡಾಲರ್ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.
1. ‘ಸ್ಕ್ರೀಮ್’ $35 ಮಿಲಿಯನ್
2. ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ $20.8 ಮಿಲಿಯನ್
3. ‘ಸಿಂಗ್ 2’ $8.3 ಮಿಲಿಯನ್