ಹೈದರಾಬಾದ್ :ಇತ್ತೀಚಿನ ದಿನಗಳಲ್ಲಿ ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಪ್ರತಿದಿನ, ಸಾರಾ ಒಂದಲ್ಲ ಒಂದು ಪೋಸ್ಟ್‌ನಿಂದ ಸುದ್ದಿಯಾಗುತ್ತಿದ್ದಾರೆ. ಸಾರಾ ತಮ್ಮ 'ಅತ್ರಂಗಿ ರೇ' ಚಿತ್ರದ ಬಗ್ಗೆಯೂ ಚರ್ಚೆಯಲ್ಲಿದ್ದು, ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಈ ಚಿತ್ರದ ಪ್ರಮೋಷನ್ ಕೂಡ ಮಾಡುತ್ತಿದ್ದಾರೆ.
ಸಾರಾ ಅಲಿ ಖಾನ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಶಿವನ ದೇವಸ್ಥಾನದಲ್ಲಿ, ಸಾರಾ ಶಿವಲಿಂಗಕ್ಕೆ ನೀರು ಅರ್ಪಿಸಿ 'ಅತ್ರಂಗಿ ರೇ' ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣಲಿ ಎಂದು ಪ್ರಾರ್ಥಿಸಿದ್ದಾರೆ.