ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿದ್ದು, ಬೀಚ್ನಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಬೀಚ್ನಲ್ಲಿರುವ ಫೋಟೋ ಪೋಸ್ಟ್ ಮಾಡಿದ ಸಾರಾ ಅಲಿ ಖಾನ್ ಸಾರಾ ಬೀಚ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದು, ಶೇರ್ ಮಾಡಿರುವ ಫೋಟೋಗಳಿಗೆ ದಿ ಲಯನ್ ಕಿಂಗ್‌ನ ಪ್ರಸಿದ್ಧ ಹಕುನಾ ಮಾತಾಟಾ ಹಾಡನ್ನು ಶೀರ್ಷಿಕೆಯಲ್ಲಿ ವಿವರಿಸಿದ್ದಾರೆ. ಹಕುನಾ ಮಾತಾಟಾ - ಇದರರ್ಥ ಯಾವುದೇ ಚಿಂತೆಯಿಲ್ಲ ಎಂದು ಬರೆದಿದ್ದಾರೆ. ಫೋಟೋದಲ್ಲಿ ಬಿಳಿ ಬಣ್ಣದ ಕ್ರಾಪ್ ಟಾಪ್ ತೊಟ್ಟಿದ್ದು, ಅದರ ಮೇಲೆ ಚಿಲ್(chill) ಎಂದಿದೆ. ನಟಿ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚಿನ ಕೆಲ ದಿನಗಳ ಹಿಂದೆ ಮನೀಶ್ ಮಲ್ಹೋತ್ರಾ ಅವರ ಫ್ಯಾಶನ್ ಕೌಚರ್ ಚಿತ್ರ ನೂರನಿಯತ್ನಲ್ಲಿ ಕಾಣಿಸಿಕೊಂಡಿದ್ದ ಸಾರಾ, ವಧುವಿನ ಉಡುಗೆ ಮತ್ತು ಭಾರವಾದ ಆಭರಣಗಳನ್ನು ಧರಿಸಿ ಮದು ಮಗಳ ರೀತಿ ಕಾಣಿಸಿಕೊಂಡಿದ್ದರು. ಅದರ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು.
ಓದಿ: ಸಣ್ಣ ವಿಷಯಕ್ಕೆ ಮಾವನ ಜೊತೆ ದೊಡ್ಡ ಜಗಳ ಮಾಡಿದ್ರಾ ಬಿಗ್ ಬಾಸ್ ಮಂಜು!
ಸದ್ಯ ಸಾರಾ ಅಲಿ ಖಾನ್ ಆನಂದ್ ಎಲ್ ರೈ ನಿರ್ದೇಶನದ ಅಟ್ರಂಗಿ ರೇ ಚಿತ್ರದಲ್ಲಿ ನಟಿಸುತ್ತಿದ್ದು, ಅಕ್ಷಯ್ ಕುಮಾರ್ ಮತ್ತು ಧನುಷ್ ಅವರೊಂದಿಗೆ ಮೊದಲ ಬಾರಿಗೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಪ್ರೇಮಕಥೆಯಾಗಿದ್ದು, ಪ್ರೇಮಿಗಳ ದಿನದಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ವಿಳಂಬವಾಗಿದೆ. ಚಿತ್ರತಂಡ ಸಿನಿಮಾವನ್ನು ಆಗಸ್ಟ್ 6, 2021 ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.