ಕರ್ನಾಟಕ

karnataka

ETV Bharat / sitara

ವಿಮಾನ ನಿಲ್ದಾಣದಿಂದ ಕಾಣೆಯಾಗಿದ್ದ ಸಾರಾ, ರಾಧಿಕಾ ಲಡಾಖ್​ನಲ್ಲಿ ಪತ್ತೆ.. ಜಸ್ಲೀನ್​ ಎಲ್ಲಿ!? - ಸಾರಾ ಅಲಿ ಖಾನ್ ಲಡಾಖ್​ ಪ್ರವಾಸ

ಸಾರಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಲಡಾಖ್​ ಪ್ರವಾಸ ಕುರಿತು ಒಂದೆರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಾರಾ ಮತ್ತು ರಾಧಿಕಾ ಮದನ್​ ಪೋಸ್ ನೀಡುತ್ತಿದ್ದು, ಫ್ರೇಮ್‌ನಲ್ಲಿ ಜಸ್ಲೀನ್ ಕಾಣೆಯಾಗಿದ್ದಾಳೆ..

sara-ali-khan-shares-pics-videos-from-ladakh-trip-with-radhika-madan
ಸಾರಾ ರಾಧಿಕಾ

By

Published : Aug 27, 2021, 3:55 PM IST

ಹೈದ್ರಾಬಾದ್ ​:ಬಾಲಿವುಡ್ ನಟರಾದ ಸಾರಾ ಅಲಿ ಖಾನ್, ರಾಧಿಕಾ ಮದನ್ ಮತ್ತು ಸಂಗೀತ ಸಂಯೋಜಕ-ಗಾಯಕಿ ಜಸ್ಲೀನ್ ರಾಯಲ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬುಧವಾರ ಕಂಡು ಬಂದಿದ್ದರು.

ಆದ್ರೆ, ಮೂವರು ಎಲ್ಲಿಗೆ ಪಯಣ ಬೆಳೆಸುತ್ತಿದ್ದಾರೆ ಎಂಬ ವಿಚಾರ ನಿಗೂಢವಾಗಿತ್ತು. ಸದ್ಯ ಸಾರಾ ಸಾಮಾಜಿಕ ಜಾಲತಾಣದಲ್ಲಿ ಲಡಾಖ್​ ಫೋಟೋಗಳನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳ ಕೌತುಕಕ್ಕೆ ತೆರೆ ಎಳೆದಿದ್ದಾರೆ.

ಸಾರಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಲಡಾಖ್​ ಪ್ರವಾಸ ಕುರಿತು ಒಂದೆರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಾರಾ ಮತ್ತು ರಾಧಿಕಾ ಮದನ್​ ಪೋಸ್ ನೀಡುತ್ತಿದ್ದು, ಫ್ರೇಮ್‌ನಲ್ಲಿ ಜಸ್ಲೀನ್ ಕಾಣೆಯಾಗಿದ್ದಾಳೆ. ಚಿತ್ರಗಳ ಜೊತೆ "ಪ್ರಕೃತಿ, ಪ್ರಕೃತಿ.. ಸಂತೋಷ, ಶಾಂತಿ, ಶಾಂತಿ" ಎಂಬ ಶೀರ್ಷಿಕೆ ಬರೆದು ಲಡಾಖ್ ರಜೆಯ ಝಲಕ್‌ಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಸಾರಾ, ಅಕ್ಷಯ್ ಕುಮಾರ್ ಮತ್ತು ಧನುಷ್ ಅಭಿನಯದ ಅತ್ರಂಗಿ ರೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಆದಿತ್ಯ ಧರ್ ನಿರ್ದೇಶನದ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆ ನಟಿಸುತ್ತಿದ್ದಾರೆ ಎಂಬ ಟಾಕ್‌ ಇವೆ.

ABOUT THE AUTHOR

...view details