ಕರ್ನಾಟಕ

karnataka

ETV Bharat / sitara

ಕೊನೆಗೂ ನನ್ನ ಪ್ರಥಮ ಪ್ರೇಮದೆಡೆಗೆ...!! ಸಾರಾ ಪ್ರೇಮಿ ಯಾರು ಗೊತ್ತಾ?? - ಕೂಲಿ ನಂ 1'ನ ರಿಮೇಕ್

ಶೂಟಿಂಗ್ ಸ್ಥಳಕ್ಕೆ ಹಿಂದಿರುಗಿದ ಬಳಿಕ ಸಾರಾ ತನ್ನ ಉತ್ಸಾಹವನ್ನು ವ್ಯಕ್ತಪಡಿಸಲು ಫೋಟೋ ಒಂದನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿದ್ದಾರೆ.

Sara Ali Khan
ಸಾರಾ

By

Published : Aug 26, 2020, 9:09 PM IST

ಮುಂಬೈ:ಕೋವಿಡ್​-19 ಸಾಂಕ್ರಾಮಿಕ ರೋಗ ಕಾರಣದಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣದ ವಿರಾಮದ ಬಳಿಕ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಬುಧವಾರ ಮತ್ತೆ ಕ್ಯಾಮೆರಾ ಎದುರಿಸಲು ಶೂಟಿಂಗ್ ಸೆಟ್‌ಗಳಿಗೆ ಮರಳಿದ್ದಾರೆ.

ಸಾರಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಗೆ ಕ್ಯಾಮೆರಾದ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಶೂಟಿಂಗ್ ಸ್ಥಳಕ್ಕೆ ಹಿಂದಿರುಗಿದ ಬಳಿಕ ಸಾರಾ ತನ್ನ ಉತ್ಸಾಹವನ್ನು ವ್ಯಕ್ತಪಡಿಸಲು ಅದನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿದ್ದಾರೆ.

ಸಾರಾ ಪೋಸ್ಟ್ ಮಾಡಿರುವ ಫೋಟೋ

"ಅಂತಿಮವಾಗಿ ನನ್ನ ಜೀವನದ ಪ್ರಥಮ ಪ್ರೇಮಕ್ಕೆ ಹಿಂತಿರುಗಿದ್ದೇನೆ" ಎಂದು ಹಾರ್ಟ್​ ಸಿಂಬಲ್​ನೊಂದಿಗೆ ಕ್ಯಾಮರಾ ಫೋಟೋ ಪೋಸ್ಟ್​ ಮಾಡಿದ್ದಾಳೆ.

ಖಾನ್ ಕೊನೆಯ ಬಾರಿಗೆ ಇಮ್ತಿಯಾಜ್ ಅಲಿಯ ಲವ್ ಆಜ್ ಕಲ್ ​ನಲ್ಲಿ ಕಾರ್ತಿಕ್ ಆರ್ಯನ್​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು

ಅವರ ಮುಂಬರುವ ಚಿತ್ರ ಹಿರಿಯ ನಟ ಗೋವಿಂದ ಅವರ 'ಕೂಲಿ ನಂ 1'ನ ರಿಮೇಕ್. ಗೋವಿಂದ ಹಾಗೂ ಕರಿಷ್ಮಾ ಕಪೂರ್​ರ ಚಿತ್ರದ ಹೆಸರನ್ನೇ ಇಲ್ಲೂ ಬಳಸಿಕೊಳ್ಳಲಾಗಿದೆ. ಸಾರಾಗೆ ನಟ ವರುಣ್ ಧವನ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details