ಹೈದರಾಬಾದ್: ಬಾಲಿವುಡ್ ನಟಿ ಸಾರಾ ಅಲಿ ಖಾನ್ ತಮ್ಮ ಮುಂಬರುವ ಗ್ಯಾಸ್‌ಲೈಟ್ ಸಿನಿಮಾದ ಚಿತ್ರೀಕರಣಕ್ಕಾಗಿ ಗುಜರಾತಿನ ರಾಜ್‌ಕೋಟ್‌ಗೆ ತೆರಳಿದರು. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.
ಗ್ಯಾಸ್‌ಲೈಟ್ ಸಿನಿಮಾಗೆ ನಿರ್ದೇಶಕ ಪವನ್ ಕೃಪಲಾನಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದ ಶೂಟಿಂಗ್‌ಗಾಗಿ ಸಾರಾ ಗುಜರಾತ್‌ಗೆ ತೆರಳಿದ್ದಾರೆ. ಸಿನಿಮಾದಲ್ಲಿ ಚಿತ್ರಾಂಗದ ಸಿಂಗ್ಮತ್ತು ವಿಕ್ರಾಂತ್ ಮಾಸ್ಸಿ ಅಭಿನಯಿಸುತ್ತಿದ್ದಾರೆ.
ಸದ್ಯ ಚಿತ್ರತಂಡ ರಾಜ್ಕೋಟ್ನಲ್ಲಿ ಸಿನಿಮಾದ ಪ್ರಮುಖ ಭಾಗಗಳನ್ನು ಚಿತ್ರೀಕರಿಸಲಿದೆ. ಸಾರಾ ಮೊದಲ ಬಾರಿಗೆ ಪ್ರತಿಭಾವಂತ ಬಾಲಿವುಡ್ ನಟ ವಿಕ್ರಾಂತ್ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದು, ಇದಕ್ಕಾಗಿ ಅವರು ಉತ್ಸುಕರಾಗಿದ್ದಾರೆ.