ಬಾಲಿವುಡ್ ಸೂಪರ್ಸ್ಟಾರ್ ಸಂಜಯ್ ದತ್ ಅವರ ಮಗಳಾದ ತ್ರಿಷಾಲಾ ದತ್ ಹವಾಯ್ ಬೀಚ್ನಲ್ಲಿ ಎಂಜಾಯ್ ಮೂಡ್ನಲ್ಲಿದ್ದಾರೆ. ಇತ್ತೀಚಿಗಿನ ಪ್ರವಾಸದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿವೆ.
ವೃತ್ತಿಯಲ್ಲಿ ಮನಃಶಾಸ್ತ್ರಜ್ಞೆಯಾಗಿರುವ ಆಕೆ ವಿರಾಮದ ವೇಳೆ ಹವಾಯ್ ಪ್ರವಾಸದಲ್ಲಿದ್ದಾರೆ. 5 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿರುವ ತ್ರಿಷಾಲಾ ತನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ಕೆಲ ಫೋಟೋ ಹಂಚಿಕೊಂಡಿದ್ದು, ಅಲೋಹಾ ಎಂದು ಬರೆದುಕೊಂಡಿದ್ದಾರೆ. ಹಯಾವ್ಲಿಯನ್ ಪ್ರಕಾರ ಅಲೋಹಾ ಎಂದರೆ ಹಲೋ ಎಂಬರ್ಥ ಬರಲಿದೆ.