ಬಾಲಿವುಡ್ ಮುನ್ನಾ ಭಾಯ್, ಖಳನಾಯಕ್ ಎಂದೇ ಹೆಸರಾದ ಸಂಜಯ್ ದತ್ ಕ್ಯಾನ್ಸರ್ನಿಂದ ಬಳಲುತ್ತಿರುವುದು ತಿಳಿದ ವಿಚಾರ. ಆಗಸ್ಟ್ನಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸಂಜಯ್ ದತ್ಗೆ ತಮಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂದು ತಿಳಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದರು.
ಕ್ಯಾನ್ಸರ್ನಿಂದ ಬಳಲುತ್ತಿರುವ ಸಂಜಯ್ ದತ್ ಹೇಗಾಗಿದ್ದಾರೆ ನೋಡಿ..! - Sanjay dutt new phot viral
ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ಸಂಜಯ್ ದತ್ ಬಹಳ ಕೃಶರಾಗಿದ್ದಾರೆ. ಸಂಜಯ್ ದತ್ ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ನಿಂತಿರುವ ಫೋಟೋವೊಂದು ವೈರಲ್ ಆಗಿದ್ದು ಅಭಿಮಾನಿಗಳು ಈ ಫೋಟೋ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಜಯ್ ದತ್ ಚಿಕಿತ್ಸೆಗೆ ತೆರಳಿದಾಗಿನಿಂತ ಮಾನ್ಯತಾ ದತ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪತಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡುತ್ತಿದ್ದರು. ಆದರೆ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಲು ಆರಂಭಿಸಿದ ನಂತರ ಮೊದಲ ಬಾರಿಗೆ ಸಂಜಯ್ ದತ್ ಫೋಟೋವೊಂದು ರಿವೀಲ್ ಆಗಿದೆ. ಸಂಜಯ್ ದತ್ ಮೊದಲಿಗಿಂತ ಬಹಳ ಕೃಶರಾಗಿದ್ದಾರೆ. ಸಂಜಯ್ ದತ್ ಪಕ್ಕ ವೈದ್ಯರೊಬ್ಬರು ನಿಂತಿದ್ಧಾರೆ. ಆ ಫೋಟೋ ನೋಡಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ನೀವು ಆದಷ್ಟು ಬೇಗ ಗುಣಮುಖರಾಗಿ ಮೊದಲಿನಂತೆ ಆರೋಗ್ಯವಾಗಿರಿ ನಿಮ್ಮನ್ನು ಈ ರೀತಿ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರದಿಂದ ಬರೆದುಕೊಂಡಿದ್ದಾರೆ.