ಕರ್ನಾಟಕ

karnataka

ETV Bharat / sitara

ಮುಂಬೈ ಜನರ ಹಸಿವು ನೀಗಿಸುತ್ತಿರುವ ಡಬ್ಬಾವಾಲಗಳಿಗೆ ನೆರವಾಗಿ... ಅಧೀರನ ಕಳಕಳಿ - ನಟ ಸಂಜಯ್ ದತ್ ಟ್ವೀಟ್​

ಸಾಮಾಜಿಕ ಜಾಲತಾಣದಲ್ಲಿ ಒಂದು ಸಾಮಾಜಿಕ ಕಳಕಳಿಯುಳ್ಳ ಪೋಸ್ಟ್​ ಮಾಡಿರುವ ನಟ ಸಂಜಯ್ ದತ್, ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋತವರ ಕೈಗಳನ್ನು ಬಲಪಡಿಸಬೇಕು ಎಂದಿದ್ದಾರೆ.

Sanjay Dutt has a special message for Mumbai's Dabbawalas
ನಟ ಸಂಜಯ್ ದತ್

By

Published : Jun 9, 2020, 7:12 PM IST

ಮುಂಬೈ:ಕೊರೊನಾ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಡಬ್ಬಾವಾಲಗಳಿಗೆ ಮುಂಬೈ ಜನರು ಸಹಾಯ ಮಾಡಬೇಕು ಎಂದು ಬಾಲಿವುಡ್​ ಹಿರಿಯ ನಟ ಸಂಜಯ್​ ದತ್​ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರ ಸಚಿವ ಅಸ್ಲಾಮ್ ಶೇಖ್ ಅವರ ಟ್ವೀಟ್ ​ಅನ್ನು ಹಂಚಿಕೊಳ್ಳುತ್ತಾ, ಬಿಕ್ಕಟ್ಟಿನ ಈ ಸಮಯದಲ್ಲಿ ಮುಂಬೈ ಜನರ ಹೊಟ್ಟೆ ತುಂಬಿಸುವ ಡಬ್ಬಾವಾಲಾಗಳಿಗೆ ಸರ್ಕಾರ ಸಹಾಯ ಮಾಡುತ್ತಿದೆ ಎಂದು ಹೇಳಿರುವ ಮುನ್ನಾಭಾಯಿ, ಅವರಿಗೆ ಎಲ್ಲ ರೀತಿಯ ಬೆಂಬಲವನ್ನು ನೀಡಬೇಕು ಎಂದಿದ್ದಾರೆ.

ಡಬ್ಬಾವಾಲಾಗಳು ದಶಕಗಳಿಂದ ನಮಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅನೇಕ ಮುಂಬೈಕರ್​ಗಳಿಗೆ ಆಹಾರ ನೀಡುವ ಮೂಲಕ ಹಸಿವು ತೀರಿಸುತ್ತಿದ್ದಾರೆ. ಈಗ ನಾವು ಮುಂದೆ ಬಂದು ಅವರನ್ನು ಬೆಂಬಲಿಸುವ ಸಮಯ ಬಂದಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಕಳಕಳಿಯುಳ್ಳ ಸಂದೇಶವೊಂದನ್ನು ಬರೆದಿದ್ದಾರೆ. ಅಲ್ಲದೇ ಈ ಟ್ವೀಟ್​ ಅನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಕಚೇರಿ, ರಾಜ್ಯ ಕ್ಯಾಬಿನೆಟ್ ಸಚಿವ ಆದಿತ್ಯ ಠಾಕ್ರೆ ಮತ್ತು ನಟ ಸುನಿಲ್ ಶೆಟ್ಟಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಡಬ್ಬಾವಾಲಾಗಳು ಮುಂಬೈ ನಗರದ ಎರಡನೇ ಜೀವ ಸೆಲೆ ಎಂದು ಬರೆದು ಟ್ವೀಟ್​ ಮಾಡಿರುವ ಸಚಿವ ಅಸ್ಲಾಮ್ ಶೇಖ್, ಮಹಾವಿಕಾಸ್ ಅಘಾಡಿ ಸರ್ಕಾರವು ಬಿಕ್ಕಟ್ಟಿನ ಸಮಯದಲ್ಲಿ ಅವರೊಂದಿಗೆ ನಿಲ್ಲಲು ಬದ್ಧವಾಗಿದೆ ಎಂದಿದ್ದಾರೆ.

ABOUT THE AUTHOR

...view details