ಕರ್ನಾಟಕ

karnataka

ETV Bharat / sitara

ಕ್ಯಾನ್ಸರ್​ ಗೆದ್ದ ನಟ ಸಂಜಯ್​ ದತ್​​... ಮಕ್ಕಳ ಬರ್ತ್​​ಡೇ ದಿನವೇ ಮಾಹಿತಿ ಹೊರಹಾಕಿದ 'ಅಧೀರ'! - ಕೆಜಿಎಫ್​​ನಲ್ಲಿ ಭಾಗಿಯಾಗಲಿರುವ ಸಂಜಯ್​ ದತ್​

ಮಹಾಮಾರಿ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಬಾಲಿವುಡ್​ ಸ್ಟಾರ್​ ನಟ ಸಂಜಯ್​ ದತ್​ ಇದೀಗ ಅದರಿಂದ ಹೊರಬಂದಿದ್ದಾಗಿ ಹೇಳಿಕೊಂಡಿದ್ದಾರೆ.

Sanjay dutta
Sanjay dutta

By

Published : Oct 21, 2020, 3:59 PM IST

ಮುಂಬೈ: ಉಸಿರಾಟದ ತೊಂದರೆ ಕಾರಣ ಆಗಸ್ಟ್​ 11ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್​​ ನಟ ಸಂಜಯ್​ ದತ್​​ ಅವರಿಗೆ ಶ್ವಾಸಕೋಸದ ಕ್ಯಾನ್ಸರ್​ ಇರುವುದು ಕನ್ಫರ್ಮ್​​ ಆಗಿತ್ತು. ಇದಾದ ಬಳಿಕ ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ನಟ ಇದೀಗ ಮಹಾಮಾರಿಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

61 ವರ್ಷದ ನಟ ಸಂಜಯ್​ ದತ್​​ಗೆ 4ನೇ ಹಂತದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಸಿನಿಮಾ ಶೂಟಿಂಗ್​ನಿಂದ ತಾವು ಸಣ್ಣ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಸಂಜಯ್​ ದತ್​ ಟ್ವೀಟ್​ ಮಾಡಿ ಮಾಹಿತಿ ಸಹ ಹೊರಹಾಕಿದ್ದರು.

'ಅಧೀರ'ನಾಗಲು ಮತ್ತೆ ಫಿಟ್ ಆ್ಯಂಡ್ ಫೈನ್​ ಆಗಿರೋದಾಗಿ ಸಂಜಯ್ ದತ್ ಪೋಸ್ಟ್..!

ಇಂದು ಸಂಜಯ್​ ದತ್​​ ಮಕ್ಕಳಾದ ಶಹ್ರಾನ್​ ಹಾಗೂ ಇಕ್ರಾ 10ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಸಂದರ್ಭದಲ್ಲಿ ತಾವು ಕ್ಯಾನ್ಸರ್​ ವಿರುದ್ಧ ಗೆಲುವು ಸಾಧಿಸಿರುವುದಾಗಿ ಬಾಲಿವುಡ್​ ನಟ ತಿಳಿಸಿದ್ದಾರೆ. ತಮ್ಮ ಟ್ವೀಟರ್​​ ಅಕೌಂಟ್​​ನಲ್ಲಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ, ಕಳೆದ ಕೆಲ ವಾರಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಕಠಿಣ ದಿನಗಳಾಗಿದ್ದವು. ಆದರೆ ದೇವರು ಅದರ ವಿರುದ್ಧ ಹೋರಾಡುವ ಸಾಮರ್ಥ್ಯ ನನಗೆ ನೀಡಿ ಅದರಲ್ಲಿ ಗೆಲುವು ಸಾಧಿಸಿದ್ದೇನೆ. ನನ್ನ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಂತೋಷದ ಸುದ್ದಿ ತಿಳಿಸಲು ನಾನು ಇಷ್ಟಪಡುತ್ತೇನೆ ಎಂದಿರುವ ನಟ, ಕ್ಯಾನ್ಸರ್​ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾಗಿ ತಿಳಿಸಿದ್ದಾರೆ. ಇದು ನನ್ನ ಕುಟುಂಬಕ್ಕೆ ಹಾಗೂ ಮಕ್ಕಳಿಗೆ ನಾನು ನೀಡುತ್ತಿರುವ ಗಿಫ್ಟ್​ ಎಂದು ಹೇಳಿದ್ದಾರೆ.

ಇದೇ ವೇಳೆ ವೈದ್ಯರಿಗೆ ಧನ್ಯವಾದ ತಿಳಿಸಿರುವ ಅವರು, ಡಾ. ಸೇವಂತಿ ಹಾಗೂ ಅವರು ತಂಡಕ್ಕೆ ಆಭಾರಿಯಾಗಿದ್ದೇನೆ. ಈ ವೇಳೆ ನರ್ಸ್​, ಮೆಡಿಕಲ್​​ ಸಿಬ್ಬಂದಿ ತಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಸುಮಾರು ಎರಡು ತಿಂಗಳ ಕಾಲ ವಿಶ್ರಾಂತಿ ಪಡೆದುಕೊಂಡಿರುವ ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್-2 ಚಿತ್ರದಲ್ಲಿ 'ಅಧೀರ'ನಾಗಲು ಫಿಟ್ ಆ್ಯಂಡ್ ಫೈನ್​ ಆಗಿರೋದಾಗಿ ಕಳೆದ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದರು.

ABOUT THE AUTHOR

...view details