ಕರ್ನಾಟಕ

karnataka

ETV Bharat / sitara

'ಅಧೀರ'ನಾಗಲು ಮತ್ತೆ ಫಿಟ್ ಆ್ಯಂಡ್ ಫೈನ್​ ಆಗಿರೋದಾಗಿ ಸಂಜಯ್ ದತ್ ಪೋಸ್ಟ್..! - ಕೆಜಿಎಫ್​-2 ಚಿತ್ರೀಕರಣದ ಸುದ್ದಿ

ಬಾಲಿವುಡ್ ನಟ ಸಂಜಯ್ ದತ್ ತಾವು ಕೆಜಿಎಫ್-2 ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿರುವುದಾಗಿ ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Sanjay Dutt
ಸಂಜಯ್ ದತ್

By

Published : Oct 16, 2020, 1:48 PM IST

ನವದೆಹಲಿ:ಸುಮಾರು 2 ತಿಂಗಳ ನಂತರ ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್-2 ಚಿತ್ರದಲ್ಲಿ 'ಅಧೀರ'ನಾಗಲು ಫಿಟ್ ಆ್ಯಂಡ್ ಫೈನ್​ ಆಗಿರೋದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಸಂಜಯ್ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಕಪ್ಪು ಬಣ್ಣದ ಟಿ-ಶರ್ಟ್ ಹಾಗೂ ಕಾರ್ಗೋ ಪ್ಯಾಂಟ್​​ನಲ್ಲಿರುವ ಮೂರು ಭಾವಚಿತ್ರಗಳನ್ನು ಹಂಚಿಕೊಂಡಿದ್ದು, ಅಧೀರ ಮತ್ತು ಕೆಜಿಎಫ್​ ಚಾಪ್ಟರ್-2 ಎಂಬ ಹ್ಯಾಷ್​​ಟ್ಯಾಗ್​​ಗಳೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಿದ್ಧವಿರುವುದಾಗಿ ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಸಂಜಯ್ ದತ್​ರ ಕೇಶ ವಿನ್ಯಾಸಕ ಆಲೀಂ ಹಕೀಂ ಅವರು ಸಂಜಯ್ ದತ್ ಅವರ ಸರ್ಜರಿಯ ಗುರುತುಗಳನ್ನು ತೋರಿಸುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈಗ ಸಂಜಯ್ ದತ್ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಭಾವಚಿತ್ರ ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಆಗಸ್ಟ್ 11ರಂದು ಉಸಿರಾಟದ ತೊಂದರೆಯಿಂದ ಹಾಗೂ ಎದೆನೋವಿನ ಸಮಸ್ಯೆಯಿಂದ ದತ್‌ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಲ್ಲಿಂದ ಇಲ್ಲಿಯವರೆಗೆ ಕೆಜಿಎಫ್-2 ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದರು.

ABOUT THE AUTHOR

...view details