ದಾಂಪತ್ಯ ಜೀವನದಲ್ಲಿ ಉಂಟಾದ ಬಿರುಕಿನಿಂದ ಹೊರಬಂದಿರುವ ನಟಿ ಸಮಂತಾ ವೃತ್ತಿಜೀವನದಲ್ಲಿ ಗಟ್ಟಿಯಾಗಿ ನೆಲೆನಿಂತು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದೀಗ ಈ ನಟಿಗೆ ಸಂಬಂಧಿಸಿದಂತೆ 2017ರ ಹಳೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಂದರ್ಶನದ ವಿಡಿಯೋದಲ್ಲಿ ಸಮಂತಾಗೆ ವರದಿಗಾರರು, ಲೈಂಗಿಕತೆ ಮತ್ತು ಆಹಾರದ ನಡುವೆ ನಿಮ್ಮ ಆಯ್ಕೆ ಯಾವುದೆಂದು ಪ್ರಶ್ನಿಸಿದ್ದರು.
'ಸೆಕ್ಸ್ & ಫುಡ್ ಈ ಎರಡರಲ್ಲಿ ನಿಮಗಿಷ್ಟ ಯಾವುದು?' ನಟಿ ಸಮಂತಾ ಉತ್ತರಿಸಿದ ಹಳೆ ವಿಡಿಯೋ ವೈರಲ್ - ಸಮಂತಾ ಸಂದರ್ಶನ ವಿಡಿಯೋ,
ಟಾಲಿವುಡ್‌ನ ಹೆಸರಾಂತ ನಟಿ ಸಮಂತಾ ಬಗ್ಗೆ ಒಂದಿಲ್ಲೊಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಈ ರೀತಿಯ ಸಂಗತಿಗಳು ಅವರ ಡೈವೋರ್ಸ್ ಪ್ರಕರಣದ ಬಳಿಕ ಹೆಚ್ಚಾಗಿವೆ.
!['ಸೆಕ್ಸ್ & ಫುಡ್ ಈ ಎರಡರಲ್ಲಿ ನಿಮಗಿಷ್ಟ ಯಾವುದು?' ನಟಿ ಸಮಂತಾ ಉತ್ತರಿಸಿದ ಹಳೆ ವಿಡಿಯೋ ವೈರಲ್ Samantha old video viral, Tollywood actress Samantha old video viral, Samantha interview video, Samantha old video viral in Social media, ಸಮಂತಾ ಹಳೆಯ ವಿಡಿಯೋ ವೈರಲ್, ಟಾಲಿವುಡ್ ನಟಿ ಸಮಂತಾ ಹಳೆಯ ವಿಡಿಯೋ ವೈರಲ್, ಸಮಂತಾ ಸಂದರ್ಶನ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಹಳೆಯ ವಿಡಿಯೋ ವೈರಲ್,](https://etvbharatimages.akamaized.net/etvbharat/prod-images/768-512-13804023-1035-13804023-1638514767235.jpg)
ಸಾಮಾಜಿಕ ಜಾಲತಾಣದಲ್ಲಿ ಹಳೆಯ ವಿಡಿಯೋ ವೈರಲ್
ಈ ಪ್ರಶ್ನೆ ಸಮಂತಾ ಅವರನ್ನು ಕೆಲಕಾಲ ಯೋಚಿಸುವಂತೆ ಮಾಡಿತು. ಮೊದಲಿಗೆ ‘ಡ್ಯಾಮ್, ನನಗೆ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದರು. ಇತ್ತೀಚೆಗೆ ನಟಿ ತಮ್ಮ ಮೊದಲ ವಿದೇಶಿ ಚಿತ್ರ ‘ಅರೇಂಜ್ಮೆಂಟ್ಸ್ ಆಫ್ ಲವ್’ಗೆ ಸಹಿ ಮಾಡಿದ ನಂತರ ಹಾಲಿವುಡ್ಗೆ ಹಾರಿದ್ದಾರೆ. ಈ ಚಿತ್ರಕ್ಕೆ ತೆರಳುವ ಮೊದಲು ಸಮಂತಾ ಎರಡು ತಮಿಳು-ತೆಲುಗು ದ್ವಿಭಾಷಾ ಚಿತ್ರಗಳ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ.
Last Updated : Dec 3, 2021, 1:27 PM IST