ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಸಲ್ಲು ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.
ಪ್ರಭುದೇವ್ ನಿರ್ದೇಶನದ ಈ ಚಿತ್ರ 2020ರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದಾಗಿ ತಡವಾಗಿದೆ. ಚಿತ್ರವನ್ನು ಓಟಿಟಿ ಪ್ಲಾಟ್‌ಫಾರಂನಲ್ಲಿ ರಿಲೀಸ್ ಮಾಡುವ ಸುದ್ದಿ ಹರಡಿದಾಗ ಸಿನಿಮಾ ಹಾಲ್ ಮಾಲೀಕರ ಸಂಘಗಳು ಸಲ್ಲುಗೆ ಪತ್ರ ಬರೆದು 2021ರ ಈದ್ ಹಬ್ಬದಂದು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವಂತೆ ಕೋರಿದ್ದರು. ಅವರ ವಿನಂತಿಯ ಮೇರೆಗೆ ಸಲ್ಮಾನ್ ಖಾನ್ ಈದ್ ಹಬ್ಬದಂದೇ ರಾಧೆ ಚಿತ್ರ ಮಂದಿಕ್ಕೆ ಬರುವುದಾಗಿ ಘೋಷಿಸಿದ್ದರು. ಈಗ ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಓಟಿಟಿ ಪ್ಲಾಟ್ ಫಾರಂನಲ್ಲಿ ಚಿತ್ರ ಬಿಡುಗಡೆ ಮಾಡುತ್ತಾರಾ ಎಂಬ ಪ್ರಶ್ನೆಗಳು ಮೂಡುತ್ತಿವೆ.