ಹೈದರಾಬಾದ್ : ಒಂದು ಕಾಲದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಲವ್ ಅಫೇರ್ ಇತ್ತು, ನಂತರ ಕಾರಣಾಂತರದಿಂದ ಬ್ರೇಕ್ ಅಪ್ ಆಯ್ತು ಅಂತ ಸುದ್ದಿ ಹರಿದಾಡುತ್ತಿತ್ತು. ಈ ನಡುವೆ ಕತ್ರಿನಾ - ವಿಕ್ಕಿ ಮದುವೆಗೂ ಸಲ್ಮಾನ್ ಗೈರಾಗಿದ್ದರು. ಅಲ್ಲದೇ, ವಿಶ್ ಕೂಡಾ ಮಾಡಿಲ್ಲ. ಆದ್ರೆ ಸಲ್ಮಾನ್ ಖಾನ್ ಕುಟುಂಬ ಸದಸ್ಯರು ನವ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ.
ವಿಕ್ಕಿ- ಕತ್ರಿನಾ ಜೋಡಿಗೆ ವಿಶ್ ಮಾಡಿದ ಸಲ್ಮಾನ್ ಖಾನ್ ಕುಟುಂಬ - ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಲವ್ ಅಫೇರ್
ಸಲ್ಮಾನ್ ಖಾನ್, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಜೋಡಿಯ ವಿವಾಹಕ್ಕೆ ಇನ್ನೂ ಶುಭ ಕೋರಿಲ್ಲ. ಆದರೆ, ಅವರ ಕುಟುಂಬ ಸದಸ್ಯರು ನವ ದಂಪತಿಗಳಿಗೆ 'ಜೀವಮಾನ ಸುಖವಾಗಿರಲಿ' ಎಂದು ಹಾರೈಸಿದ್ದಾರೆ.
ರೂಮರ್ಸ್ ನಡುವೆಯೂ ಸಹ ಕತ್ರಿನಾ, ಸಲ್ಮಾನ್ ಕುಟುಂಬದಲ್ಲಿ ನಡೆಯುವ ಸಂಭ್ರಮಾಚರಣೆ ಭಾಗವಾಗಿದ್ದರು. ಆದರೆ, ಕತ್ರಿನಾ ವಿಕ್ಕಿ ತಮ್ಮ ಮದುವೆಗೆ ಸಲ್ಮಾನ್ ಬಾಯ್ನನ್ನು ಆಹ್ವಾನಿಸಲಿಲ್ಲವೇ ಅಥವಾ ಟೈಗರ್ ಮದುವೆ ಮಿಸ್ ಮಾಡಿಕೊಂಡ್ರಾ ಅನ್ನೋದೆ ಡೌಟು. ಸಾಮಾನ್ಯವಾಗಿ ಸಲ್ಮಾನ್ ಭಾಯ್, ಕತ್ರಿನಾ ಜನ್ಮದಿನಕ್ಕೆ ಶುಭ ಕೋರುತ್ತಿದ್ದರು. ಆದರೆ, ಅವರು ತಮ್ಮ ಗೆಳತಿಯ ಹೊಸ ಆರಂಭಕ್ಕೆ ಅಭಿನಂದಿಸಲಿಲ್ಲ.
ಸಲ್ಮಾನ್ ಅವರ ಕಿರಿಯ ಸಹೋದರಿ ಅರ್ಪಿತಾ ಖಾನ್ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ವಿಕ್ಕಿ ಮತ್ತು ಕತ್ರಿನಾ ಮದುವೆಯ ಶುಭ ಕೋರಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವಿಕ್ಕಿ ಮತ್ತು ಕತ್ರಿನಾ ಚಿತ್ರವನ್ನು ಹಂಚಿಕೊಂಡು 'ಹೃದಯಪೂರ್ವಕ ಅಭಿನಂದನೆಗಳು, ನಿಮ್ಮ ಜೀವನ ಸಂತೋಷ ಮಯವಾಗಿರಲಿ ಎಂದು ಬಯಸುತ್ತೇನೆ' ಎಂದು ಬರೆದಿದ್ದಾರೆ. ಅರ್ಪಿತಾ ಪತಿ ಆಯುಷ್ ಶರ್ಮಾ ಸಹ ತಮ್ಮ ಇನ್ಸ್ಟಾಗ್ರಾಂನಲ್ಲಿ 'ನಿಮ್ಮಿಬ್ಬರ ಜೀವನ ಸುಖಮಯವಾಗಿರಲಿ.. ಬ್ಲೆಸ್ ಯು ಅಂತ ಬರೆದುಕೊಂಡಿದ್ದಾರೆ.