ಕರ್ನಾಟಕ

karnataka

ETV Bharat / sitara

ಡಾಕ್ಟರ್​-ಪೊಲೀಸ್​ ಕೊ ಸಲ್ಯೂಟ್ ಕರೋನಾ.. ಸಲ್ಲು ಹಾಡಿರುವ ಕೋವಿಡ್-19 ಜಾಗೃತಿ ಗೀತೆ ಕೇಳಿ - ಸಲ್ಮಾನ್ ಖಾನ್ ಪ್ಯಾರ್ ಕರೋನಾ ಹಾಡು

ಕೊರೊನಾ ಕುರಿತು ಜಾಗೃತಿ ಮೂಡಿಸಲು ಬಾಲಿವುಡ್​ ನಟ ಸಲ್ಮಾನ್​ ಖಾನ್​ ಪ್ಯಾರ್ ಕರೋನಾ ಎಂಬ ಹಾಡನ್ನು ಹಾಡಿದ್ದು, ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿದೆ.

alman Khan's coronavirus-themed song
ಸಲ್ಲು ಹಾಡಿರುವ ಕೋವಿಡ್-19 ಜಾಗೃತಿ ಗೀತೆ ಕೇಳಿ

By

Published : Apr 20, 2020, 4:08 PM IST

Updated : Apr 20, 2020, 5:17 PM IST

ಮುಂಬೈ:ಕೊರೊನಾ ವೈರಸ್​ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ತಾವೇ ಹಾಡಿರುವ​ 'ಪ್ಯಾರ್ ಕರೋನಾ' ಎಂಬ ಹಾಡನ್ನು ಸೂಪರ್​ ಸ್ಟಾರ್​ ಸಲ್ಮಾನ್ ಖಾನ್ ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿರುವ ಸಲ್ಲು, ಎಮೋಷನಲಿ ಹತ್ತಿರವಿರಿ, ಆದರೆ, ದೈಹಿಕವಾಗಿ ಅಂತರ ಕಾಯ್ದುಕೊಳ್ಳಿ. ಪ್ಯಾರ್ ಕರೋನಾ ಹಾಡು ಬಿಡುಗಡೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ವಿವಿಧ ಮುನ್ನೆಚ್ಚರಿಕೆ ಕ್ರಮಗಳ ಮೇಲೆ ಬೆಳಕು ಚೆಲ್ಲುವ ಗೀತೆ ಇದಾಗಿದೆ. ಮನೆಯಲ್ಲೆ ಕೆಲಸ ಮಾಡುವುದು(Work from Home), ಮನೆಯಲ್ಲಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅನಗತ್ಯವಾಗಿ ರಸ್ತೆಯಲ್ಲಿ ಓಡಾಡದಿರುವುದು ಸೇರಿದಂತೆ ಕೋವಿಡ್-19 ವಿರುದ್ಧ ಹೋರಾಡಲು ಇತರ ಪ್ರಮುಖ ಕ್ರಮಗಳ ಬಗ್ಗೆ ಈ ಗೀತೆಯಲ್ಲಿ ತಿಳಿಸಲಾಗಿದೆ.

Last Updated : Apr 20, 2020, 5:17 PM IST

ABOUT THE AUTHOR

...view details