ಕರ್ನಾಟಕ

karnataka

ETV Bharat / sitara

ಹೊಸ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಲ್ಮಾನ್ ಖಾನ್: ಜ.22ಕ್ಕೆ ರಿಲೀಸ್ - guru randhawa lulia vantur music video

ಗಾಯಕ ಗುರು ರಾಂಧವ ಮತ್ತು ಲುಲಿಯಾ ವಂತೂರ್ ಹಾಡಿರುವ 'ಮೇನ್ ಚಲಾ' ಹಾಡಿನಲ್ಲಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದು, ಜನವರಿ 22ಕ್ಕೆ ಹಾಡು ಬಿಡುಗಡೆಯಾಗಲಿದೆ.

Salman Khan to feature in Guru Randhawa's new song
ಹೊಸ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಲ್ಮಾನ್ ಖಾನ್, ಜ.22ಕ್ಕೆ ರಿಲೀಸ್

By

Published : Jan 20, 2022, 8:33 AM IST

ಮುಂಬೈ:ಬಾಲಿವುಡ್ ಸೂಪರ್​ಸ್ಟಾರ್ ಸಲ್ಮಾನ್ ಖಾನ್ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಾಯಕ ಗುರು ರಾಂಧವ ಮತ್ತು ಲುಲಿಯಾ ವಂತೂರ್ ಹಾಡಿರುವ 'ಮೇನ್ ಚಲಾ' ಹಾಡಿನಲ್ಲಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ.

ಸಲ್ಮಾನ್ ಖಾನ್ ಜೊತೆಯಲ್ಲಿ ಪ್ರಗ್ಯಾ ಜೈಸ್ವಾಲ್ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡನ್ನು ಸಲ್ಮಾನ್ ಖಾನ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದರೆ, ಶಬೀನಾ ಖಾನ್ ನಿರ್ದೇಶಿಸುತ್ತಿದ್ದಾರೆ.

ಹೊಸ ಹಾಡಿನಲ್ಲಿ ಕಾಣಿಸಿಕೊಳ್ಳಲಿರುವ ಸಲ್ಮಾನ್ ಖಾನ್

ಈ ಕುರಿತು ಇನ್ಸ್​​ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಗಾಯಕ ಗುರು ರಾಂಧವ ಜನವರಿ 22ಕ್ಕೆ ಮೇನ್ ಚಲಾ ಹಾಡು ಯೂಟ್ಯೂಬ್​ನ ಟಿ-ಸಿರೀಸ್​ನಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮಾಲ್ಡೀವ್ಸ್​ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಸಾರಾ ಅಲಿ ಖಾನ್​

ABOUT THE AUTHOR

...view details