ಮುಂಬೈ:ಬಾಲಿವುಡ್ ದಬಂಗ್ ಸಲ್ಮಾನ್ ಖಾನ್ ಕೊರೊನಾ ವೈರಸ್ ವ್ಯಾಕ್ಸಿನ್ನ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, ಇಂದು ಕೊರೊನಾ ವ್ಯಾಕ್ಸಿನ್ನ ಮೊದಲ ಡೋಸ್ ಪಡೆದುಕೊಂಡಿದ್ದೇನೆ ಎಂದಿದ್ದಾರೆ.
ಇವರ ಜೊತೆಗೆ ಹಿರಿಯ ಚಿತ್ರಕಥೆಗಾರ ಸಲೀಮ್ ಖಾನ್ ಹಾಗೂ ನಿರ್ಮಾಪಕರಾದ ಸಲ್ಮಾ ಖಾನ್ ಕೆಲವು ದಿನಗಳ ಹಿಂದೆ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು ಎಂದು ಸಲ್ಮಾನ್ ಖಾನ್ ಆಪ್ತ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿತ್ತು.