ಮುಂಬೈ (ಮಹಾರಾಷ್ಟ್ರ): ಸಲ್ಮಾನ್ ಖಾನ್ ಅಭಿನಯದ ವರ್ಷದ ಬಹು ನಿರೀಕ್ಷಿತ ಸಿನಿಮಾವಾದ 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ತನ್ನ ಟ್ರೈಲರ್ ಅನ್ನು ಗುರುವಾರ ಬಿಡುಗಡೆ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀವ್ಸ್ಗಳನ್ನು ಪಡೆದುಕೊಂಡು ಮಿಂಚಿದೆ. ಭರ್ಜರಿಯಾದ ಆ್ಯಕ್ಷನ್ ಸನ್ನಿವೇಶಗಳು ಈ ಟ್ರೇಲರ್ನಲ್ಲಿದ್ದು, ದಿಶಾ ಪಟಾನಿ ನಾಯಕಿಯಾಗಿ ಖಾನ್ ಜೊತೆ ಪರದೆ ಹಂಚಿಕೊಂಡಿದ್ದಾರೆ.
ನಟ ಖಾನ್ ಅವರು ಟ್ವೀಟರ್ನಲ್ಲಿ ಸಿನೆಮಾದ ಟ್ರೇಲರ್ನ್ನು ಪೋಸ್ಟ್ ಮಾಡಿದ್ದು, #ರಾಧೆ ಟ್ರೇಲರ್' ಸುಮಾರು 2 ನಿಮಿಷ 51 ಸೆಕೆಂಡ್ಗಳ ಕಾಲವಿದೆ. ಇದರಲ್ಲಿ ಪ್ರಾರಂಭವಾಗುವ ಸನ್ನಿವೇಶ ಮುಂಬೈನಲ್ಲಿ ಕಂಡು ಬರುವ ಡ್ರಗ್ ಮಾಫಿಯಾದ ಜೊತೆಗೆ ಹೆಚ್ಚುತ್ತಿರುವ ಕೊಲೆಯನ್ನು ಬಿಂಬಿಸುತ್ತದೆ ಎಂದು ಬರೆದು ಕೊಂಡಿದ್ದಾರೆ.
ಸಿನೆಮಾದಲ್ಲಿ ಸಲ್ಮಾನ್ ಖಾನ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಮುಂಬೈ ನಗರಕ್ಕೆ ಅಂಟಿದ ಡ್ರಗ್ಸ್ ಕಳಂಕವನ್ನು ತೊಡೆದುಹಾಕಲು ಹೀರೋ ಪ್ರಯತ್ನಿಸುತ್ತಾನೆ. ಚಿತ್ರದಲ್ಲಿನ ಒಂದು ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಜಾಕಿ ಶ್ರಾಫ್ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಸಿನೆಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.