ಬಾಲಿವುಡ್ ನಟ ಸಲ್ಮಾನ್ ಖಾನ್ ಯುವಕ-ಯುವತಿಯರ ಸದೃಢತೆಗಾಗಿ ಭಾರತದಾದ್ಯಂತ 300 ಜಿಮ್ಗಳನ್ನು ತೆರೆಯಲು ತಯಾರಿ ನಡೆಸಿದ್ದಾರೆ.
ಫಿಟ್ ಇಂಡಿಯಾ ಚಳವಳಿಗೆ ಪಣತೊಟ್ಟ ಬ್ಯಾಡ್ಬಾಯ್: ಸಲ್ಲು ಮುಂದಿನ ಯೋಜನೆಯೇನು? - etv bharat
ಸಲ್ಲು ಬಾಯ್ ಯುವ ಭಾರತ ಕಟ್ಟಲು ಮುಂದಾಗಿದ್ದಾರೆ. ಫಿಟ್ನೆಸ್ ಕ್ಷೇತ್ರದಲ್ಲಿ ಅಭಿಮಾನಿಗಳ ಗಮನ ಸೆಳೆದಿರುವ ಅವರು, ಯುವಕರಿಗೆ ಒಂದು ಭರ್ಜರಿ ಆಫರ್ ನೀಡಲು ತಯಾರಿ ನಡೆಸಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್
ತಮ್ಮ ಮೋಹಕ ಫಿಟ್ನೆಸ್ ಮೂಲಕ ಹೆಚ್ಚು ಗಮನ ಸೆಳೆದಿರುವ ಸಲ್ಲು, ಎಸ್ಕೆ -27 ಜಿಮ್ ಫ್ರ್ಯಾಂಚೈಸ್ ಅನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. 2020 ರ ವೇಳೆಗೆ ಭಾರತದಾದ್ಯಂತ 300 ಜಿಮ್ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಹಿಂದೆ ಒಂದು ಉತ್ತಮ ಉದ್ದೇಶವೂ ಇದೆಯಂತೆ.
ಆರೋಗ್ಯದ ದೃಷ್ಟಿಯಿಂದ ಮತ್ತು ನಿರುದ್ಯೋಗಿ ಯುವಕರಿಗಾಗಿ ಒಂದು ಉದ್ಯೋಗ ಸೃಷ್ಟಿಸುವ ಸಲುವಾಗಿ ಬ್ಯಾಡ್ಬಾಯ್ ಈ ನಿರ್ಧಾರ ಮಾಡಿದ್ದಾರಂತೆ. ಇತ್ತೀಚೆಗೆ ‘ಬೀಯಿಂಗ್ ಹ್ಯೂಮನ್’ ಎಂಬ ಫಿಟ್ನೆಸ್ ಕೇಂದ್ರಗಳನ್ನು ತೆರೆದಿದ್ದ ಅವರು, ಇದೀಗ ಇದನ್ನೇ ದೇಶದಾದ್ಯಂತ ಹರಡು ಸಜ್ಜಾಗಿದ್ದಾರೆ.