ಕರ್ನಾಟಕ

karnataka

ETV Bharat / sitara

ಸಲ್ಮಾನ್ ಖಾನ್‌​​ ಕಂಠದಿಂದ ಕನ್ನಡ ಕೇಳಿದ್ದೀರಾ? - ಕನ್ನಡಕ್ಕೆ ಡಬ್​ ಆದ ಸಿನಿಮಾ

ಹಿಂದಿಯಲ್ಲಿ ಮಾಸ್​ ಮತ್ತು ಕ್ಲಾಸ್​ ಡೈಲಾಗ್​ಗಳನ್ನು ಹೇಳುವ ನಟ ಸಲ್ಮಾನ್​ ಖಾನ್​ ಅವರ ಕಂಠದಲ್ಲಿ ಕನ್ನಡವನ್ನು ಕೇಳಿದ್ದೀರಾ? ಇಂತಹ ಅವಕಾಶವೊಂದು ಇದೀಗ ಕೂಡಿಬಂದಿದೆ.

Salman Khan

By

Published : Oct 18, 2019, 1:05 PM IST

ಚಂದನವನದ ಸಿನಿ ಟಾಕೀಸ್​ನಲ್ಲಿ ಸದ್ಯದಲ್ಲೇ ಮಹತ್ತರವಾದ ಪ್ರಸಂಗವೊಂದನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿಬರಲಿದೆ. ಚಿತ್ರಸಂತೆಯಲ್ಲಿ ಬಾಲಿವುಡ್​​​ ಹಾಗೂ ಸ್ಯಾಂಡಲ್​ವುಡ್​ ಎರಡೂ ಸಂಗಮವಾಗಲಿದ್ದು ಇದಕ್ಕೆ ದೊಡ್ಡ ತಾರಾ ಬಳಗವೇ ಸಾಕ್ಷಿಯಾಗಲಿದೆ. ಭಜರಂಗಿ ಭಾಯಿಜಾನ್​ ಸಲ್ಮಾನ್​ ಖಾನ್​ ನಟನೆಯ ದಬಾಂಗ್​ 3 ಸಿನಿಮಾದಲ್ಲಿ ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದು ತಮಗೆಲ್ಲ ತಿಳಿದಿರುವ ಸಂಗತಿಯಾದರೂ ಇದಕ್ಕಿಂತ ಖುಷಿ ಕೊಡುವ ಮತ್ತೊಂದು ಸುದ್ದಿ ಸದ್ದು ಮಾಡುತ್ತಿದೆ.

ಸುದೀಪ್​ -ಸಂಗ್ರಹ ಚಿತ್ರ

ಅದೆನಪ್ಪಾ ಅಂದ್ರೆ ದಬಾಂಗ್​ 3 ಸಿನಿಮಾ ಕನ್ನಡದ ಸೇರಿದಂತೆ ಒಟ್ಟು ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು ಇದಕ್ಕಾಗಿ ನಟ ಸಲ್ಮಾನ್​ ಖಾನ್​ ಕನ್ನಡ ಕಲಿಯುತ್ತಿದ್ದಾರಂತೆ. ಕನ್ನಡಕ್ಕೆ ಡಬ್​ ಆಗಲಿರುವ ಈ ಸಿನಿಮಾದಲ್ಲಿ ಮಾಸ್​ ಹಾಗೂ ಕ್ಲಾಸ್​ ಡೈಲಾಗ್​ ಹೇಳಲಿರುವ ಭಾಯಿಜಾನ್​ಗೆ​ ಸುದೀಪ್​ ಸಾಥ್​ ನೀಡಿದ್ದಾರೆ ಅನ್ನೋ ಸುದ್ದಿ ಇದೀಗ ಗುಟ್ಟಾಗಿ ಉಳಿದಿಲ್ಲ.

ದಬಾಂಗ್​ 3 - ಸಂಗ್ರಹ ಚಿತ್ರ

ಇನ್ನು ಮತ್ತೊಬ್ಬ ಕನ್ನಡಿಗ ಪ್ರಭುದೇವ್​ ದಬಾಂಗ್ 3 ಸಿನಿಮಾಗೆ ನಿರ್ದೇಶನ ನೀಡಿದ್ದು ಚಿತ್ರ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಪವರ್​ಫುಲ್​ ಡೈಲಾಗ್​ಗಳಿದ್ದು ​ಸಲ್ಲು ಭಾಯ್​ ಕನ್ನಡ ಭಾಷೆಯನ್ನು ಹೇಗೆ ಉಚ್ಚಾರಣೆ ಮಾಡಿದ್ದಾರೆ ಅನ್ನೋದು ಚಿತ್ರ ತೆರೆಗೆ ಬಂದ ಬಳಿಕವೇ ಗೊತ್ತಾಗಲಿದೆ.

ಸಲ್ಮಾನ್​ ಖಾನ್​ - ಸಂಗ್ರಹ ಚಿತ್ರ

ABOUT THE AUTHOR

...view details