ಕರ್ನಾಟಕ

karnataka

By

Published : Dec 29, 2021, 7:51 PM IST

ETV Bharat / sitara

ಕಾರು ಬಿಟ್ಟು ಆಟೋ ಓಡಿಸಿದ ಬಾಲಿವುಡ್​ ನಟ ಸಲ್ಮಾನ್​ ಖಾನ್​..

ಸಲ್ಮಾನ್ ಅವರ ಈ ಅನಿರೀಕ್ಷಿತ ನಡೆ ನೆಟ್ಟಿಗರ ಗಮನ ಸೆಳೆದಿದೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, 'ಸಲ್ಲು ಭಾಯ್ ರಾಕ್ಸ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸಲ್ಮಾನ್​ ಖಾನ್​ 'ಅತಿ ಸರಳ ವ್ಯಕ್ತಿ' ಎಂದು ಕೊಂಡಾಡಿದ್ದಾರೆ..

salman khan
ನಟ ಸಲ್ಮಾನ್​ ಖಾನ್

ಮುಂಬೈ (ಮಹಾರಾಷ್ಟ್ರ):ಬಾಲಿವುಡ್​ ನಟ ಸಲ್ಮಾನ್​ ಖಾನ್​ ತಮ್ಮ ಅಭಿಮಾನಿಗಳನ್ನು ರಂಜಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಮಹಾರಾಷ್ಟ್ರದ ರಾಯಘಡ್​ ಜಿಲ್ಲೆಯ ಪನ್ವೇಲ್​ನಲ್ಲಿರುವ ಫಾರ್ಮ್​ಹೌಸ್​ನಲ್ಲಿ ಸಲ್ಮಾನ್​ ಕಾಲ ಕಳೆಯುತ್ತಿದ್ದಾರೆ. ಅಲ್ಲಿಯ ಆಟೋ ಡ್ರೈವರ್​ ಒಬ್ಬರಿಂದ ಆಟೋ ಪಡೆದು ಅದನ್ನು ಓಡಿಸಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲಿ ಕಾಣುವಂತೆ ನಟ ಸಲ್ಮಾನ್​ ಖಾನ್ ಸಂಜೆ ವೇಳೆಯಲ್ಲಿ ತಮ್ಮ ಕಾರಿನಿಂದ ಇಳಿದು ಆಟೋ ಡ್ರೈವರ್ ಹತ್ತಿರ ತೆರಳಿ ಆಟೋ ಪಡೆದಿದ್ದಾರೆ. ಬಳಿಕ ಅವರೇ ಆಟೋವನ್ನು ಓಡಿಸಿ ಖುಷಿ ಪಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಈ ದೃಶ್ಯವನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಸಲ್ಮಾನ್ ಅವರ ಈ ಅನಿರೀಕ್ಷಿತ ನಡೆ ನೆಟ್ಟಿಗರ ಗಮನ ಸೆಳೆದಿದೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, 'ಸಲ್ಲು ಭಾಯ್ ರಾಕ್ಸ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸಲ್ಮಾನ್​ ಖಾನ್​ 'ಅತಿ ಸರಳ ವ್ಯಕ್ತಿ' ಎಂದು ಕೊಂಡಾಡಿದ್ದಾರೆ.

ಈಚೆಗಷ್ಟೇ ಸಲ್ಮಾನ್​ ಖಾನ್​ ತಮ್ಮ 56ನೇ ಜನ್ಮದಿನವನ್ನು ಪನ್ವೇಲ್​ನಲ್ಲಿರುವ ಫಾರ್ಮ್​ಹೌಸ್​ನಲ್ಲಿ ಆಚರಿಸಿಕೊಂಡಿದ್ದರು. ಇದಕ್ಕೂ ಮುನ್ನ ಅವರಿಗೆ ಫಾರ್ಮ್​ಹೌಸ್​ನಲ್ಲಿಯೇ ಹಾವು ಕಚ್ಚಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹಾವು ವಿಷಪೂರಿತವಲ್ಲದ ಕಾರಣ ಕೆಲ ಗಂಟೆಗಳ ಬಳಿಕ ಡಿಸ್ಚಾರ್ಜ್​ ಮಾಡಲಾಗಿತ್ತು.

ಇದನ್ನೂ ಓದಿ:'ದಿ ಬಿಗ್ ಪಿಕ್ಚರ್' ಶೋ ಮೂಲಕ ಮನರಂಜಿಸಲಿದ್ದಾರೆ ರಣವೀರ್ ಸಿಂಗ್-ಗೋವಿಂದ

ABOUT THE AUTHOR

...view details