ಮುಂಬೈ :ಬಾಲಿವುಡ್ ಬಾದಷಾ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಕಭಿ ಈದ್ ಕಭಿ ದೀವಾಲಿ ಸಿನಿಮಾ 2023ರ ಈದ್ ಮಿಲಾದ್ನಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಹೇಳಿದ್ದಾರೆ.
ಕಾಮಿಡಿ ಡ್ರಾಮಾ ಇರುವ ಈ ಸಿನಿಮಾದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನ ಫರ್ಹಾದ್ ಸಾಮ್ಜಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿದ್ದಾರಂತೆ. ಈ ಹಿಂದೆ ಫರ್ಹಾದ್ ಸಾಮ್ಜಿ 2014ರಲ್ಲಿ ಕಿಕ್ ಸಿನಿಮಾದಲ್ಲಿ ಸಲ್ಮಾನ ಜತೆಗೆ ಕೆಲಸ ಮಾಡಿದ್ದರು.