ಕರ್ನಾಟಕ

karnataka

ETV Bharat / sitara

ಹಾಲನ್ನು ವ್ಯರ್ಥ ಮಾಡಬೇಡಿ, ಬಡಮಕ್ಕಳಿಗೆ ನೀಡಿ: ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮನವಿ - ಹಾಲನ್ನು ವ್ಯರ್ಥ ಮಾಡದಿರಲು ಸಲ್ಮಾನ್ ಖಾನ್ ಸಲಹೆ

ಅಭಿಮಾನಿಗಳು ಚಿತ್ರಮಂದಿರದೊಳಗೆ ಪಟಾಕಿ ಸಿಡಿಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್, ಪೋಸ್ಟರ್​ಗಳ ಮೇಲೆ ಹಾಲು ಸುರಿದು ವ್ಯರ್ಥ ಮಾಡದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Salman Khan asks fans to not 'waste' milk on Antim posters: 'Give it to poor kids'
ಹಾಲನ್ನು ವ್ಯರ್ಥ ಮಾಡಬೇಡಿ, ಬಡಮಕ್ಕಳಿಗೆ ನೀಡಿ: ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮನವಿ

By

Published : Nov 28, 2021, 7:45 PM IST

ಮುಂಬೈ(ಮಹಾರಾಷ್ಟ್ರ):ಬಾಲಿವುಡ್​ ನಟ ಸಲ್ಮಾನ್ ಖಾನ್ ಅಭಿನಯದ ಅಂತಿಮ್ ಸಿನಿಮಾ ತೆರೆಗಪ್ಪಳಿಸಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರಮಂದಿರದಲ್ಲಿ ಅಭಿಮಾನಿಗಳು ತಮ್ಮ ಅಭಿಮಾನ ಮೆರೆಯಲು ಅಂತಿಮ್ ಚಿತ್ರದ ಪೋಸ್ಟರ್ ಮತ್ತು ಕಟೌಟ್​​ಗಳ ಮೇಲೆ ಹಾಲು ಸುರಿಯುವ ದೃಶ್ಯಗಳು ವೈರಲ್ ಆಗಿದ್ದು, ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳು ಸಿನಿಮಾ ಪೋಸ್ಟರ್​ಗೆ ಹಾಲು ಸುರಿಯುತ್ತಿರುವ ಹಾಗೂ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಭಾನುವಾರ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಸಲ್ಮಾನ್ ಖಾನ್ ಹಾಲನ್ನು ವ್ಯರ್ಥ ಮಾಡಬೇಡಿ ಎಂದು ಟಿಪ್ಪಣಿ ಬರೆದಿದ್ದು, ಬಡಮಕ್ಕಳಿಗೆ ಅದನ್ನು ಹಂಚುವಂತೆ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ಅಭಿಮಾನಿಗಳು ಚಿತ್ರಮಂದಿರದೊಳಗೆ ಅಂತಿಮ್ ಸಿನಿಮಾ ವೀಕ್ಷಿಸುವಾಗ ಪಟಾಕಿ ಸಿಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದ ಸಲ್ಮಾನ್ ಖಾನ್ ಚಿತ್ರಮಂದಿರಗಳಲ್ಲಿ ಪಟಾಕಿ ಸಿಡಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಇದರ ಜೊತೆಗೆ ಚಿತ್ರಮಂದಿರದೊಳಗೆ ಪಟಾಕಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡದಂತೆ ಥಿಯೇಟರ್ ಮಾಲೀಕರಿಗೆ ಒತ್ತಾಯಿಸಿದ್ದರು.

'ಅಂತಿಮ್- ದಿ ಫೈನಲ್ ಟ್ರೂಥ್' ಚಿತ್ರವನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್​ ನಿರ್ಮಿಸಿದೆ. ಕನ್ನಡಿಗ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವುದು ವಿಶೇಷವಾಗಿದೆ. 2022ರಲ್ಲಿ ಟೈಗರ್-3 ಚಿತ್ರ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಬೇಡಿ: ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮನವಿ

ABOUT THE AUTHOR

...view details