ಪ್ರಭುದೇವ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ 'ದಬಾಂಗ್ 3' ಶೂಟಿಂಗ್ ವೇಳೆ 'ಊರ್ವಸಿ ಊರ್ವಸಿ' ಸಾಂಗ್ಗೆ ಸಲ್ಲು ಭಾಯ್, ಕನ್ನಡದ ಮಾಣಿಕ್ಯ ಹಾಗೂ ವರದ್ ಖಾನ್ ಕುಣಿದಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟರ್ಲ್ಲಿ ಹಂಚಿಕೊಂಡಿದ್ದಾರೆ ಭಜರಂಗಿ ಭಾಯ್ಜಾನ್. ಇದಕ್ಕೆ ಕಾಮೆಂಟ್ ಮಾಡಿರುವ ಅಭಿನಯ ಚಕ್ರವರ್ತಿ ಬಹುಶಃ ಇದು ಅತ್ಯಂತ ದುಬಾರಿ ಸ್ಟೆಪ್ಸ್ ಎಂದಿದ್ದಾರೆ.
ಸಲ್ಮಾನ್ ಜತೆ ಸುದೀಪ್ ಮಸ್ತ್ ಡಾನ್ಸ್... ದುಬಾರಿ ಸ್ಟೆಪ್ಸ್ ಹೇಳಿಕೊಟ್ರು ಪ್ರಭುದೇವ್ - ಡಾನ್ಸ್
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್ವುಡ್ ಬಾದ್ ಷಾ ಕಿಚ್ಚ ಸುದೀಪ್ ಮಸ್ತ್ ಡಾನ್ಸ್ ಮಾಡಿದ್ದಾರೆ. ಈ ತಾರೆಯರಿಗೆ ಡಾನ್ಸ್ ಗುರು ಪ್ರಭುದೇವ್ ಸ್ಟೆಪ್ಸ್ ಹೇಳಿಕೊಟ್ಟಿದ್ದಾರೆ.

ಸುದೀಪ್
ಇನ್ನು ಸಲ್ಮಾನ್ ಖಾನ್ ಅವರ 'ದಬಾಂಗ್ 3' ಸಿನಿಮಾದಲ್ಲಿ ಚಂದನವನದ ಅಮಿತಾಭ್ ಬಚ್ಚನ್ ಸುದೀಪ್ ಲೀಡ್ ರೋಲ್ ಪ್ಲೇ ಮಾಡ್ತಿದ್ದಾರೆ. ಕಳೆದ ತಿಂಗಳ ಮುಂಬೈಗೆ ಹಾರಿದ್ದ ಅವರು ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ.