ಕರ್ನಾಟಕ

karnataka

ETV Bharat / sitara

ಸಲ್ಮಾನ್​​ ಖಾನ್​​ಗೆ ​ತಂದೆ ಸಲೀಂ ಖಾನ್​​ ಕೊಟ್ರು ಒಂದೊಳ್ಳೆ ಸಲಹೆ! ಏನದು ಅಡ್ವೈಸ್​​​!! - ಸಲ್ಮಾಂ ಖಾನ್​ ತಂದೆ ಸಲೀಂ ಖಾನ್​​

ಸಲ್ಲು ಬಾಯ್​​​ ಸಿನಿಮಾಗಳನ್ನು ನೋಡಿ ಪ್ರತೀ ಬಾರಿಯೂ ತಂದೆ ಸಲೀಂ ಖಾನ್​​ ಟೀಕೆ ಮಾಡುತ್ತಾರಂತೆ. ಸಿನಿಮಾ ಬಗ್ಗೆ ಏನೇ ಇದ್ದರೂ ನೇರವಾಗಿಯೇ ಹೇಳುತ್ತಾರಂತೆ

Salim Khan advised Salman
ಸಲ್ಮಾನ್​​ ಖಾನ್​​ಗೆ ​ ತಂದೆ ಸಲೀಂ ಖಾನ್​​ ಕೊಟ್ರು ಒಳ್ಳೆ ಸಲಹೆ!

By

Published : Dec 2, 2019, 11:18 AM IST

ಸಲ್ಮಾನ್​ ಖಾನ್​ ನಟನೆಯ ದಬ್ಬಾಂಗ್​-3 ಸಿನಿಮಾ ರಿಲೀಸ್​​ಗೆ ರೆಡಿಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೆ ಈ ಸಿನಿಮಾವನ್ನು ನೋಡಿರುವ ಸಲ್ಮಾನ್​ಖಾನ್​​​ ತಂದೆ ಸಲೀಂ ಖಾನ್​​​​ ಸಲ್ಲು ಬಾಯ್​ಗೆ ಸಿನಿಮಾ ಬಗ್ಗೆ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ.

ಹೌದು ಈ ಬಗ್ಗೆ ಸ್ವತಃ ಸಲ್ಮಾನ್​ ಖಾನ್​ ಈ ಬಗ್ಗೆ ಹೇಳಿಕೊಂಡಿದ್ದಾರೆ. ಸಲ್ಲು ಬಾಯ್​​​ ಸಿನಿಮಾಗಳನ್ನು ನೋಡಿ ಪ್ರತೀ ಬಾರಿಯೂ ಸಲೀಂ ಖಾನ್​​ ಟೀಕೆ ಮಾಡುತ್ತಾರಂತೆ. ಸಿನಿಮಾ ಬಗ್ಗೆ ಏನೇ ಇದ್ದರೂ ನೇರವಾಗಿಯೇ ಹೇಳುತ್ತಾರಂತೆ.

ಹಿಂದಿನ ಸಿನಿಮಾಗಳಿಗೆ ಹೇಳಿದಂತೆ ದಬಾಂಗ್​​​-3 ಸಿನಿಮಾದ ಬಗ್ಗೆ ಮಾತನಾಡಿರುವ ಸಲೀಂ ಖಾನ್​​, ಸಲ್ಮಾನ್​​​ಗೆ ಸಲಹೆ ನೀಡಿದ್ದಾರೆ. ಬೇಟಾ ಈ ಹಿಂದೆ ನಡೆದಿರುವುದನ್ನು ಮರೆತುಬಿಡು. ಈ ಸಿನಿಮಾಕ್ಕಾಗಿ ಅತಿಯಾದ ಒತ್ತಡಗಳನ್ನು ತಲೆಗೆ ತಂದುಕೊಳ್ಳಬೇಡ. ಸಿನಿಮಾ ಯಶಸ್ಸಿನ ಬಗ್ಗೆ ತೆಲೆ ಕೆಡಿಸಿಕೊಳ್ಳಬೇಡ. ನಿನ್ನ ಮುಂದಿನ ಸಿನಿಮಾಕ್ಕೆ ಶ್ರಮಪಟ್ಟು ಕೆಲಸ ಮಾಡು ಎಂದಿದ್ದಾರೆ.

ಇನ್ನು ದಬಾಂಗ್​​-3 ಸಿನಿಮಾ ಕನ್ನಡ, ಹಿಂದಿ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್​ ಈಗಾಗಲೇ ಬಿಡುಗಡೆಯಾಗಿದ್ದು, ಇದೇ ತಿಂಗಳ 20ಕ್ಕೆ ಚಿತ್ರ ತೆರೆ ಕಾಣಲಿದೆ.

ABOUT THE AUTHOR

...view details