ಬಾಲಿವುಡ್ ಮಂದಿ ಹೊರಬಂದ್ರೆ ಸುತ್ತ ಸಾವಿರಾರು ಮಂದಿ ಮುತ್ತಿಕೊಳ್ತಾರೆ. ಇದಕ್ಕಂತಲೇ ಬಾಲಿವುಡ್ನ ಸೆಲೆಬ್ರಿಟಿಗಳು ಪರ್ಸನಲ್ ಬಾಡಿಗಾರ್ಡ್ಗಳ ನೇಮಕ ಮಾಡಿಕೊಂಡಿರುತ್ತಾರೆ. ಈ ಬಾಡಿಗಾರ್ಡ್ಸ್ ನಟ - ನಟಿಯರ ಹತ್ರ ಯಾರನ್ನೂ ಸುಳಿದಾಡಲು ಸಹ ಬಿಡುವುದಿಲ್ಲ. ಇಂತಹ ಬಾಡಿಗಾರ್ಡ್ಸ್ಗೆ ನಟಿ - ನಟಿಯರು ನೀಡುತ್ತಿರುವ ಸಂಭಾವನೆ ಏನು ಕಡಿಮೆಯಿಲ್ಲ.
ಅನುಷ್ಕಾ ಶರ್ಮಾ ಹಿಂದೆ ಸೋನು
ಇವರ ಸಂಭಾವನೆ ಕೇಳಿದ್ರೆ ನಿಮಗೂ ಸಹ ಶಾಕ್ ಆಗಬಹುದು. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತನ್ನ ಪರ್ಸನಲ್ ಬಾಡಿಗಾರ್ಡ್ ಇರದೇ ಮನೆಯಿಂದ ಹೊರ ಬರುವುದಿಲ್ಲ. ದೇಶದೊಳಗೆ ಅಷ್ಟೇ ಅಲ್ಲ ವಿದೇಶ ಪ್ರಯಾಣದಲ್ಲಿ ಈ ಬಾಡಿಗಾರ್ಡ್ ಹಾಜರಾಗಿರ್ತಾನೆ. ಪ್ರಕಾಶ್ ಸಿಂಗ್ ಆಕಾ ಸೋನು ಎಂಬ ಈ ಬಾಡಿಗಾರ್ಡ್ಗೆ ಅನುಷ್ಕಾ ವಾರ್ಷಿಕವಾಗಿಬರೋಬ್ಬರಿ 1.2 ಕೋಟಿ ರೂಪಾಯಿ ವೇತನ ನೀಡ್ತಾರಂತೆ.
ಸಲ್ಲು ಜೊತೆ ಶೆರಾ ನಂಟು
ಇನ್ನೊಂದೆಡೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗಿರುವ ಶೆರಾ, ಸಲ್ಲು ಜೊತೆ ಕುಟುಂಬ ಸದಸ್ಯನಂತೆ ಕಾಣಿಸಿಕೊಳ್ಳುತ್ತಾರೆ. ಸಲ್ಲು ಎಲ್ಲಿಯೇ ಕಾಣಿಸಿಕೊಂಡರು ಅಲ್ಲಿ ಶೆರಾ ಇದ್ದೇ ಇರ್ತಾರೆ. ಈತ ವಾರ್ಷಿಕವಾಗಿ 2 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.
ಈತ ಬರೀ ಸಲ್ಮಾನ್ ಮಾತ್ರವಲ್ಲ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಾದ ಮೈಕ್ ಟೈಸನ್ ಹಾಗೂ ಜಸ್ಟಿನ್ ಬೈಬರ್ಮುಂಬೈ ಆಗಮಿಸಿದ್ದ ವೇಳೆಯೂ ಅವರಿಗೆ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸಿದ್ದ.
ಹೆಚ್ಚು ವೇತನ ನೀಡೋ ಶಾರುಖ್